ಮೈಸೂರು: ನಗರದ ಮೃಗಾಲಯದಲ್ಲಿ ಗುರುವಾರದಿಂದ ಆಫ್ರಿಕನ್ ಹಂಟಿಂಗ್ ಚೀತಾನ್ನು ವೀಕ್ಷಕರು ವೀಕ್ಷಿಸಬಹುದಾಗಿದೆ.
ಮೈಸೂರು ಮೃಗಾಲಯಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿ ದಕ್ಷಿಣ ಆಫ್ರಿಕಾದಿಂದ ಒಂದು ಗಂಡು ಎರಡು ಹೆಣ್ಣು ಆಫ್ರಿಕನ್ ಹಂಟಿಂಗ್ ಚೀತಾವನ್ನು ಆ. 18ರಂದು ತರಲಾಗಿತ್ತು.
ಆಫ್ರಿಕನ್ ಹಂಟಿಂಗ್ ಚೀತಾ ಮೈಸೂರು ಮೃಗಾಲಯದ ವಾತಾವರಣಕ್ಕೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಸಾರ್ವಜನಿಕ ವೀಕ್ಷಣೆಗೆ ಬಿಡುಗಡೆಗೊಳಿಸಿದರು.
ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಓಡುವ ಸಾಮರ್ಥ್ಯವನ್ನು ಹೊಂದಿರುವ ಪ್ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆಫ್ರಿಕನ್ ಚೀತಾ ಮರ ಏರುವ ಸಾಮರ್ಥ್ಯದ ಕೊರತೆ ಇದ್ದು, ಗಂಟೆಗೆ 112ರಿಂದ 120ಕಿ.ಮೀ ವೇಗದಲ್ಲಿ ಓಡಬಲ್ಲುದು.
ಇದು ಫೆಲಿಡೆ ಎಂಬ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಯಾಗಿದ್ದು ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ಪ್ರಾಣಿ ಎಂಬ ಹೆಗ್ಗಳಿಕೆ ಹೊಂದಿದೆ.
ದೇಶದ ಹೈದ್ರಾಬಾದ್ ಮತ್ತು ಮೈಸೂರು ಮೃಗಾಲಯದಲ್ಲಿ ಮಾತ್ರ ಆಫ್ರಿಕನ್ ಚೀತಾ ಇವೆ.