ಮೈಸೂರು, ಅ. 15- ಮಾಜಿ, ಹಾಲಿ ಸಿಎಂ ಎಲ್ಲರಿಗೂ ಒಂದೇ ನಿಯಮ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ನಗರದಲಿ ಗುರುವಾರ ವಿಶ್ವನಾಥ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮಾಜಿ, ಹಾಲಿ ಸಿಎಂ ಎಲ್ಲರಿಗೂ ಒಂದೇ ನಿಯಮ. ಎಲ್ಲವನ್ನೂ ರಾಜಕೀಯಗೊಳಿಸುವುದು ಸರಿಯಲ್ಲ ಎಂದವರು ಕಾಂಗ್ರೆಸ್ಸಿಗರಿಗೆ ಹೇಳಿದರು.
ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಆರ್.ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಎಫ್ ಐಆರ್ ದಾಖಲಿಸಿರುವ ಬಗ್ಗೆ ವಿಶ್ವನಾಥ್ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದವರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಯಾರಿಗೆ ಎಲ್ಲಿಯವರೆಗೆ ಪ್ರವೇಶವಿರುತ್ತೆ ಅನ್ನೋದು ಗೊತ್ತಿದೆ. ಹೀಗಿದ್ದೂ ಕೆಲವರು ಒಳಗೆ ಹೋಗಿದ್ದರು. ಅಂಥವರ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ. ಎಲ್ಲವನ್ನೂ ರಾಜಕೀಯಗೊಳಿಸುವುದು ಸರಿಯಲ್ಲ ಎಂದರು.
ಆರ್.ಆರ್ ನಗರ ಮತ್ತು ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಮೂರು ಪಕ್ಷದವರು ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಅಂತಲೇ ಹೇಳುತ್ತಾರೆ. ಅಂತಿಮವಾಗಿ ಗೆಲುವು, ಸೋಲು ನಿರ್ಧಾರ ಮಾಡೋದು ಮತದಾರರು ಎಂದು ವಿಶ್ವನಾಥ್ ತಿಳಿಸಿದರು.