ಮೈಸೂರು, ಅ. 16- ಆರ್.ಆರ್.ನಗರದಲ್ಲಿ ಡಿಕೆಶಿವಕುಮಾರ್ ಗೆಲ್ಲೋಕಾಗಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಮೈಸೂರು ಅರನೆ ಆವರಣದಲ್ಲಿ ಶುಕ್ರವಾರ ಸಚಿವರು ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದ ದಸರಾ ಗಜಪಡೆಯ ಯೋಗ ಕ್ಷೇಮವನ್ನು ಮಾವುತರ ಬಳಿ ವಿಚಾರಿಸಿ, ಗಜಪಡೆಗೆ ಕಬ್ಬು ಬೆಲ್ಲ ತಿನ್ನಿಸಿ ಆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮ ವಿರುದ್ಧ ಎಫ್ ಐ ಆರ್ ವಿಚಾರವಾಗಿ ಡಿಕೆಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ಸಚಿವ ಸೋಮಶೇಖರ್ ಅವರು ಪ್ರತಿಕ್ರಿಯಿಸಿ, ಆರ್.ಆರ್.ನಗರದಲ್ಲಿ ಡಿಕೆಶಿವಕುಮಾರ್ ಗೆಲ್ಲೋಕಾಗಲ್ಲ. ಅದಕ್ಕೆ ಪಿಳ್ಳೆನೆಪ ಹುಡುಕಿಕೊಂಡು ಮಾತನಾಡುತ್ತಿದ್ದಾರೆಂದು ಟಾಂಗ್ ನೀಡಿದರು.
ನೀತಿ ಸಂಹಿತೆ ಯಾರೇ ಉಲ್ಲಂಘನೆ ಮಾಡಿದರೂ ಎಫ್ ಐ ಆರ್ ಹಾಕುತ್ತಾರೆ. ಕಳೆದ ಬಾರಿ ಮುನಿರತ್ನ ಮೇಲೂ ಎಫ್ ಐ ಆರ್ ಹಾಕಿದ್ದರು ಎಂದರು.
ಡಿಕೆಶಿವಕುಮಾರ್ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಆರ್ ಆರ್ ನಗರದಲ್ಲಿ ಗೆಲ್ಲೋಕೆ ಆಗಲ್ಲ ಅಂತ ಹೀಗೆಲ್ಲ ಮಾತನಾಡುತ್ತಾರೆಂದರು.
ಸಚಿವ ಸೋಮಶೇಖರ್ ಅವರೊಂದಿಗೆ ಶಾಸಕರಾದ ಎಸ್. ಎ. ರಾಮದಾಸ್, ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಎಚ್. ವಿ. ರಾಜೀವ್ ಉಪಸ್ಥಿತರಿದ್ದರು.