ಮೈಸೂರು: ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ದಸರಾ ಆಚರಣೆಯನ್ನು ಸರಳ, ಸಾಂಪ್ರದಾಯಿಕ ಹಾಗೂ ವರ್ಚುಯಲ್ ಆಗಿ ಆಚರಿಸಲಾಗುತ್ತಿದ್ದು, ಚಾಮುಂಡಿಬೆಟ್ಟ ಹಾಗೂ ಅರಮನೆ ಆವರಣದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ವೆಬ್‍ಸೈಟ್ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ನೇರಪ್ರಸಾರ (ಲೈವ್ ಸ್ಟ್ರೀಮಿಂಗ್) ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ಅ. 17ರಂದು ಬೆಳಗ್ಗೆ 7:45ರಿಂದ ಬೆಳಗ್ಗೆ 8:15ರ ವರೆಗೆ ನಡೆಯುವ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭ, ಅರಮನೆ ಆವರಣದಲ್ಲಿ ಅ. 17ರಿಂದ 24ರ ವರೆಗೆ ಪ್ರತಿ ದಿನ ಸಂಜೆ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೈಸೂರು ಜಿಲ್ಲಾಡಳಿತದ ವೆಬ್‍ಸೈಟ್ ಹಾಗೂ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್‍ಬುಕ್ ಪೇಜ್ ಮತ್ತು ಯೂಟ್ಯೂಬ್ ನಲ್ಲಿ ನೇರಪ್ರಸಾರ ವೀಕ್ಷಿಸಲು ಕೋರಿದೆ.
ದಸರಾ ಮಹೋತ್ಸವದ ಕೊನೆಯ ದಿನವಾದ ಅ. 26ರಂದು ನಡೆಯುವ ಜಂಬೂಸವಾರಿ ಕಾರ್ಯಕ್ರಮವನ್ನು ದೂರದರ್ಶನದ ಚಂದನ ವಾಹಿನಿಯಲ್ಲಿ ನೇರಪ್ರಸಾರ ಮಾಡಲಾಗುತ್ತಿದ್ದು, ಏಕ ಕಾಲದಲ್ಲಿ ಇತರೆ ಖಾಸಗಿ ವಾಹಿನಿಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ನೇರಪ್ರಸಾರ ವಾಗಲಿದೆ.
ದಸರಾ ಕಾರ್ಯಕ್ರಮಗಳು ನಡೆಯುವ ಸಮಯವನ್ನು ವೆಬ್‍ಸೈಟ್ https://mysore.nic.in ನಲ್ಲಿ ಪ್ರಕಟಿಸಲಾಗಿದೆ.
ನೇರಪ್ರಸಾರವನ್ನು (live streaming) ವೆಬ್‍ಸೈಟ್ ವಿಳಾಸ https://mysore.nic.in ಹಾಗೂ ಫೇಸ್‍ಬುಕ್ ಪೇಜ್ https://www.facebook.com/mysorevarthe/ ಹಾಗೂ ಯೂಟ್ಯೂಬ್ ಲಿಂಕ್ https://youtu.be/HhfbR9FMO8E ಮೂಲಕ ವೀಕ್ಷಿಸಬಹುದು.
ಸಾರ್ವಜನಿಕರು ಮನೆಯಲ್ಲೇ ಕುಳಿತು ವರ್ಚುಯಲ್ ವೇದಿಕೆಯ ಮೂಲಕ ವೀಕ್ಷಿಸಲು ಕೋರಲಾಗಿದೆ.