ದಸರಾ: ಗಮನ ಸೆಳೆದ ಭಕ್ತಿ ಗೀತೆಗಳ ಗಾಯನ

ಚಾಮರಾಜನಗರ: ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಶನಿವಾರ ಸಂಜೆ ನಗರದ ಚಾಮರಾಜೇಶ್ವರ ದೇವಾಲಯ ಆವರಣದೊಳಗೆ ಏರ್ಪಡಿಸಲಾಗಿದ್ದ ಭಕ್ತಿ ಗೀತ ಗಾಯನ ಕಾರ್ಯಕ್ರಮ ಗಮನ ಸೆಳೆಯಿತು.
ಸುರೇಶ್ ನಾಗ್ ಮತ್ತು ತಂಡದವರು ನಡೆಸಿಕೊಟ್ಟ ಭಕ್ತಿ ಗೀತೆಗಳು ನೆರೆದಿದ್ದವರನ್ನು ಭಾವಪರವಶರನ್ನಾಗಿಸಿತು.
ಸುಮಾರು ಒಂದು ತಾಸು ಪ್ರಸ್ತುತ ಪಡಿಸಿದ ಕಾರ್ಯಕ್ರಮದಲ್ಲಿ ಸುರೇಶ್ ನಾಗ್ ಅವರೊಂದಿಗೆ ತಂಡದ ಇತರೆ ಗಾಯಕರ ಕಂಠಸಿರಿಯಲ್ಲಿ ನಾನಾ ಭಕ್ತಿ ಗೀತೆಗಳು ಮೂಡಿಬಂದವು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎನ್.ಮಹೇಶ್, ಸಿ.ಎಸ್.ನಿರಂಜನ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಜಿಲ್ಲಾ ಪಂಚಾಯತ್ ಸದಸ್ಯ ಕೆರೆಹಳ್ಳಿ ನವೀನ್ ಇತರೆ ಗಣ್ಯರು ಹಾಜರಿದ್ದು ಗೀತ ಗಾಯನ ಕಾರ್ಯಕ್ರಮ ವೀಕ್ಷಿಸಿದರು.
ಉತ್ತಮವಾಗಿ ಮೂಡಿ ಬಂದ ಭಕ್ತಿ ಗೀತೆಗಳ ಗಾಯನಕ್ಕಾಗಿ ಕಲಾವಿದರನ್ನು ಪ್ರಶಂಸಿದರು.
ಉಪವಿಭಾಧಿಕಾರಿ ಡಾ.ಗಿರೀಶ್ ದಿಲೀಪ್ ಬಡೋಲೆ, ತಹಶಿಲ್ದಾರ್ ಚಿದಾನಂದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಗಿರೀಶ್ ಇತರರು ಹಾಜರಿದ್ದರು.
ಕಾರ್ಯಕ್ರಮ ವೀಕ್ಷಣೆಗೆ ವರ್ಚವಲ್ ಮೂಲಕ ಅವಕಾಶ ಮಾಡಿಕೊಡಲಾಗಿತ್ತು.