ವಿಮಾನ ನಿಲ್ದಾಣ ಗೋದಾಮಿನಲ್ಲಿದ್ದ 2.5 ಕೆಜಿ ಚಿನ್ನ ಕಳವು

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೋದಾಮಿನಲ್ಲಿದ್ದ 2.5 ಕೆಜಿ ಚಿನ್ನ ಕಳುವಾಗಿದೆ.
ಚಿನ್ನ ಕಳ್ಳಸಾಗಣೆ ವೇಳೆ ಸೀಜ್ ಮಾಡಲಾಗಿದ್ದ ಚಿನ್ನವನ್ನು ಬೆಂಗಳೂರು ಏರ್ ಪೆÇೀರ್ಟ್ ಗೋದಾಮಿನಲ್ಲಿ ಇರಿಸಲಾಗಿತ್ತು. ಆ ಚಿನ್ನ ನಾಪತ್ತೆ ಆಗಿದೆ.
ಐವರು ಕಸ್ಟಮ್ಸ್ ಅಧಿಕಾರಿಗಳು ಸೇರಿ 6 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ.
ಜೂನ್ 2012ರಿಂದ ಡಿಸೆಂಬರ್ 2014ರವರೆಗೆ ಬೆಂಗಳೂರಿನ ಏರ್ ಪೆÇೀರ್ಟ್ ನಲ್ಲಿ ಪ್ರಯಾಣಿಕರಿಂದ ಜಪ್ತಿ ಮಾಡಲಾಗಿದ್ದ ಚಿನ್ನವನ್ನು ವಿಮಾನ ನಿಲ್ದಾಣದ ಎಂ.ಹೆಚ್.ಬಿ. ಗೋಡಾನ್ ನಲ್ಲಿ ಇರಿಸಲಾಗಿತ್ತು.
ಕಸ್ಟಮ್ಸ್ ಇಲಾಖೆಯ ವಿಜಿಲೇನ್ಸ್ ಅಧಿಕಾರಿಗಳ ತನಿಖೆ ವೇಳೆ 13 ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 2 ಕೆಜಿ 594 ಗ್ರಾಂ. ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಬಿಐಗೆ ದೂರು ನೀಡಲಾಗಿತ್ತು.