ಮೈಸೂರು: ಪತ್ರಕರ್ತ ಪವನ್ ಹೆತ್ತೂರು ಅವರ ನಿಧನ ತೀವ್ರ ಬೇಸರ ತಂದಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೊರೊನಾ ಪವನ್ ಅವರನ್ನು ಬಲಿ ಪಡೆದಿರುವುದು ನಿಜಕ್ಕೂ ಖೇದಕರ. ಪತ್ರಕರ್ತರು ಕೊರೊನಾ ವಾರಿಯರ್ಸ್ ಆಗಿರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ನಾನು ಈ ಮೂಲಕ ಮಾಧ್ಯಮ ಮಿತ್ರರಲ್ಲಿ ಮನವಿ ಮಾಡುತ್ತೇನೆ. ಪವನ್ ಅವರ ನಿಧನದ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ ಎಂದು ಸಚಿವ ಎಸ್.ಟಿ.ಎಸ್. ತಿಳಿಸಿದ್ದಾರೆ.