ಮೈಸೂರು: ನಗರದ ಉದಯಗಿರಿ ಪೆÇಲೀಸರು ಕುಖ್ಯಾತ ದ್ವಿ ಚಕ್ರ ವಾಹನ ಕಳ್ಳನೊಬ್ಬನನ್ನು ಬಂಧಿಸಿ 12.20 ಲಕ್ಷ ರೂ ಬೆಲೆಯ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಕೆ.ಎನ್. ಪುರದ ಹೆಚ್.ಜಿ.ರಸ್ತೆ, 4ನೇ ಕ್ರಾಸ್ ನವಾಸಿ ಮೊಹಮ್ಮದ್ ಶುಹೇಬ್ (19), ಬಂಧಿತ ಆರೋಪಿ.
ಬಂಧಿತನಿಂದ ಪೊಲೀಸರು 12,20,000 ರೂ. ಮೌಲ್ಯದ 2 ರಾಯಲ್ ಎನ್ಫೀಲ್ಡ್, 7 ಸುಜುಕಿ ಆಕ್ಸೆಸ್ 125, 3 ಯಮಹ ಆರ್.ಎಕ್ಸ್, 1 ಹೊಂಡಾ ಡಿಯೋ, 1 ಹೊಂಡಾ ಆಕ್ಟಿವಾ, 1, ಟಿ.ವಿ.ಎಸ್. ಅಪಾಚ್ಚಿ, 1 ಬಜಾಜ್ ಪ್ಲಾಟಿನಾ, 1 ಹಿರೋ ಸ್ಪ್ಲೆಂಡರ್ ಸೇರಿ ಒಟ್ಟು 17 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಆರೋಪಿ ಬಂಧನದಿಂದ ನಗರದ ಉದಯಗಿರಿ ಠಾಣೆಯ-4, ನರಸಿಂಹರಾಜ-3, ಕೃಷ್ಣರಾಜ-1, ವಿಜಯನಗರ-3, ಮೇಟಗಳ್ಳಿ-1, ಮೈಸೂರು ಸೌತ್ ಪೆÇಲೀಸ್ ಠಾಣೆಯ-1, ಶ್ರೀರಂಗಪಟ್ಟಣ-2, ಮಂಡ್ಯ-1 ಮತ್ತು ಅರಕೆರೆ ಪೆÇಲೀಸ್ ಠಾಣೆಯ-1 ದ್ವಿ ಚಕ್ರ ವಾಹನ ಕಳುವು ಪ್ರಕರಣಗಳು ಪತ್ತೆಯಾಗಿರುತ್ತೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದಯಗಿರಿ ಪೆÇಲೀಸರು ಅ. 19ರಂದು ರಾಜೀವ ನಗರದ ರಿಂಗ್ ರಸ್ತೆಯಲ್ಲಿ ಗಸ್ತಿನಲ್ಲಿರುವಾಗ 2 ಸುಜುಕಿ ಆಕ್ಸಿಸ್ ದ್ವಿ ಚಕ್ರ ವಾಹನಗಳಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಇಬ್ಬರು ಕಾನೂನಿನ ಸಂಘರ್ಷಕ್ಕೆ ಬಾಲಕರೊಂದಿಗೆ 2 ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದಾಗ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಇವರುಗಳು ಮೈಸೂರು ನಗರ, ಮೈಸೂರು ಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಮನೆಯ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಬಗ್ಗೆ ತಿಳಿಸಿದ್ದು, ಇವರಿಂದ 17 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ನಗರದ ಡಿ.ಸಿ.ಪಿ. ಗೀತಪ್ರಸನ್ನ ಹಾಗೂ ದೇವರಾಜ ವಿಭಾಗದ ಎ.ಸಿ.ಪಿ. ಎಂ.ಎನ್. ಶಶಿಧರ್ ಅವರ ನೇತೃತ್ವದಲ್ಲಿ ಉದಯಗಿರಿ ಪೆÇಲೀಸ್ ಠಾಣೆಯ ಪೆÇಲೀಸ್ ಇನ್ಸ್ ಪೆಕ್ಟರ್ ಪೂಣಚ್ಚ. ಎನ್.ಎಂ, ಪಿ.ಎಸ್.ಐ. ಎಂ. ಜೈಕೀರ್ತಿ, ಮದನ್ ಕುಮಾರ್, ನಟರಾಜ್, ಎ.ಎಸ್.ಐ. ದಿವಾಕರ್ ಮತ್ತು ಸಿಬ್ಬಂದಿಗಳಾದ ಎಂ. ಶಂಕರ್, ಸಿದ್ದಿಕ್ ಅಹಮದ್, ಮೋಹನ್ ಕುಮಾರ್, ಕೃಷ್ಣ, ಆರ್.ಎಸ್, ಶಿವರಾಜಪ್ಪ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.