ಚಿನ್ನ ಪಡೆದು ವಂಚಿಸಿದ್ದವರಿಬ್ಬರ ಬಂಧನ

ಮೈಸೂರು: ಚಿನ್ನದ ಒಡವೆ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ ಚಿನ್ನ ಪಡೆದು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ನಗರದ ದೇವರಾಜ ಠಾಣೆ ಪೊಲಿಸರು ಬಂಧಿಸಿದ್ದಾರೆ.
ಕುಶಾಲ ನಗರ ಟೌನ್‍ನ ಬಸಪ್ಪ ಲೇಔಟ್‍ನ 4ನೇ ಬ್ಲಾಕ್ ವಾಸಿ ಚಿನ್ನ ಬೆಳ್ಳಿ ಕೆಲಸಗಾರ ಸೋಮಶೇಖರ್ (61), ಕೊಳ್ಳೆಗಾಲ ಟೌನ್ ದುಬ್ಬಟ್ಟಿವೀರಶೆಟ್ಟರ ಬೀದಿ ನಿವಾಸಿ ಚಿನ್ನ ಬೆಳ್ಳಿ ಕೆಲಸ ಮಾಡುವ ರಘು (67) ಬಂಧಿತ ಆರೋಪಿಗಳು.
ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಚಿನ್ನದ ಆಭರಣಗಳನ್ನು ತಯಾರು ಮಾಡುವ ವ್ಯವಹಾರ ನಡೆಸುತ್ತಿರುವ ಕುರುಪುಸ್ವಾಮಿ ಎಂಬವರು ಮೈಸೂರಿನಲ್ಲಿ ಚಿನ್ನದ ಆಭರಣಗಳನ್ನು ಮಾರಾಟ ಮಾಡಲು ಅ. 6ರಂದು ಬಂದಿದ್ದಾಗ ಬಂಧಿತರಿಬ್ಬರ
ಪರಿಚಯವಾಗಿದ್ದು, ಇವರುಗಳು ಒಡವೆಗಳನ್ನು ಮಾರಾಟ ಮಾಡಿಸಿಕೊಡುವುದಾಗಿ ಕುರುಪು ಸ್ವಾಮಿರವರಿಂದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದರು.
ಒಡವೆಯನ್ನು ಮಾರಾಟ ಮಾಡದೇ, ವಾಪಸ್ಸು ಕೊಡದೇ ಮೋಸ ಮಾಡಿದ್ದರು.
ಈ ಬಗ್ಗೆ ದೇವರಾಜ ಪೆÇಲೀಸ್ ಠಾಣೆಗೆ ಕುರುಪು ಸ್ವಾಮಿ ದೂರು ನೀಡಿದ್ದರು.
ತನಿಖೆ ಕೈಗೊಂಡ ದೇವರಾಜ ಪೆÇಲೀಸರು ವಂಚಕರಿಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಪೊಲೀಸರು 10 ಲಕ್ಷ ರೂ. ಮೌಲ್ಯದ 192 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ನಗರದ ಡಿ.ಸಿ.ಪಿ. ಗೀತಪ್ರಸನ್ನ ಹಾಗೂ ದೇವರಾಜ ವಿಭಾಗದ ಎ.ಸಿ.ಪಿ. ಎಂ.ಎನ್. ಶಶಿಧರ್ ಅವರ ನೇತೃತ್ವದಲ್ಲಿ ದೇವರಾಜ ಪೆÇಲೀಸ್ ಠಾಣೆಯ ಪೆÇಲೀಸ್ ಇನ್ಸ ಪೆಕ್ಟರ್ ಪ್ರಸನ್ನ ಕುಮಾರ್, ಪಿ.ಎಸ್.ಐ. ರಾಜು, ಎ.ಎಸ್.ಐ. ಉದಯಕುಮಾರ್, ಸಿಬ್ಬಂದಿಯವರಾದ ಸೋಮಶೆಟ್ಟಿ, ವೇಣುಗೋಪಾಲ್, ಚಂದ್ರು, ನಂದೀಶ್, ವೀರೇಶಬಾಗೇವಾಡಿರವರು ಈ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.