ಹುಬ್ಬಳ್ಳಿ: ಯಡಿಯೂರಪ್ಪ ನಮ್ಮ ಸರ್ವಾನುಮತದ ಸಿಎಂ ಆಯ್ಕೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಮಂಗಳವಾರ ರವಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಹಲವು ಬಾರಿ ಯತ್ನಾಳ ಹಲವು ರೀತಿಯ ಹೇಳಿಕೆ ಕೊಟ್ಟಿದ್ದಾರೆ, ಅದಕ್ಕೆ ನಾವು ಪ್ರತಿಕ್ರಿಯೆ ಕೊಡಲ್ಲ ಸಿ.ಟಿ.ರವಿ ಹೇಳಿದರು.
ಈ ಕುರಿತು ಸೂಕ್ತ ವೇದಿಕೆಯಲ್ಲಿ ನಾವು ಪ್ರತಿಕ್ರಿಯಿಸುತ್ತೇವೆ. ನಮ್ಮ ಅಂತಿಮ ಗುರಿ ರಾಷ್ಟ್ರ ಮೊದಲು ಎಂದರು.
ಕೋವಿಡ್ ಸಂಕಷ್ಟದ ನಡುವೆ ಶಾಸಕರಿಗೆ ಅನುದಾನ ಕಡಿತ ಆಗಿರುವುದು ನಿಜ. ಇದಕ್ಕೆನೂ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂಬುದು ನಿಜವಲ್ಲ ಎಂದವರು ತಿಳಿಸಿದರು.
ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಸಮರ್ಥವಾಗಿದ್ದು, ಸಚಿವರು ಸೂಕ್ತ ನಿಗಾ ವಹಿಸಿದ್ದಾರೆ ಎಂದು ರವಿ ತಿಳಿಸಿದರು.
ಹಣದುಬ್ಬರ, ದೀಡೀರ್ ಸಂಕಷ್ಟಗಳಿಗೆ ತಲಾ ಆದಾಯ ಕಡಿಮೆ ಇರುವುದಕ್ಕೆ ಮೋದಿ ಮೇಲೆ ಹೊರಿಸುವುದಲ್ಲ. ಮೋದಿ ಅವರ ರಿಸಲ್ಟ್ ಇನ್ನೂ 20 ವರ್ಷ ಬಿಟ್ಟು ಗೊತ್ತಾಗುತ್ತದೆ. ತಲಾ ಆದಾಯ ಹೆಚ್ಚಿಸಲೇಂದೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹಾಗೂ ಬಿಜೆಪಿಯ ಜನಪ್ರಿಯತೆ ಏರುಗತಿಯಲ್ಲಿ ಸಾಗಿದೆ ಎಂದವರು ತಿಳಿಸಿದರು.
ನಾಲ್ಕು ವಿಧಾನ ಪರಿಷತ್ ಚುನಾವಣೆ ಹಾಗೂ ಎರಡು ವಿಧಾನಸಭೆ ಚುನಾವಣೆಯಲ್ಲಿ ನಾವೇ ಜಯಭೇರಿ ಬಾರಿಸುತ್ತೇವೆ.
ಮುಂದಿನ ವರ್ಷ ಕೇರಳ, ತಮಿಳುನಾಡಿನ, ಪುದುಚೇರಿ ಚುನಾವಣೆ ಯಲ್ಲಿ ಗೆಲ್ಲುವುದು ನಮ್ಮ ಗುರಿ ಎಂದು ಸಿಟಿ ರವಿ ಹೇಳಿದರು.