ಬೆಂಗಳೂರು: ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ಕ್ಕಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮತ್ತು ಬೆಳಗಾವಿಯಲ್ಲಿ ನಿರ್ಮಿಸಲಾಗಿರುವ ನೂತನ ಸುಸಜ್ಜಿತ ಕಟ್ಟಡಗಳನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಲೋಕಾರ್ಪಣೆ ಮಾಡಿದರು.
ಬೆಂಗಳೂರಿನಿಂದಲೇ ವರ್ಚುಯಲ್ ವೇದಿಕೆಯ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಡಿಸಿಎಂ, ಜಿಟಿಟಿಸಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಶೇಕಡಾ ನೂರಕ್ಕೆ ನೂರು ಉದ್ಯೋಗಾವಕಾಶ ಸಿಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಹೊಸ ಉದ್ಯೋಗಗಳ ಸೃಷ್ಟಿ ಹಾಗೂ ನಿರುದ್ಯೋಗ ನಿವಾರಣೆ ಮಾಡುವಲ್ಲಿ ಈ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.
ಗುಂಡ್ಲುಪೇಟೆಯಲ್ಲಿ 51305.10 ಚದರ ಅಡಿ ವಿಸ್ತೀರ್ಣ ಪ್ರದೇಶದಲ್ಲಿ ಜಿಟಿಟಿಸಿ ಕೇಂದ್ರವನ್ನು ನಿರ್ಮಿಲಾಗಿದೆ. ಈ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಸೌಲಭ್ಯಗಳು ದೊರೆಯಲಿವೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಚಾಮರಾಜನಗರದಲ್ಲಿ ಮತ್ತಷ್ಟು ಕೈಗಾರಿಕೆ: ಗಡಿ ಜಿಲ್ಲೆಯಾಗಿರುವ ಚಾಮರಾಜ ನಗರದಲ್ಲಿ ಹೊಸದಾಗಿ ಕೈಗಾರಿಕೆಗಳು, ಉದ್ಯಮಗಳು ಬರಲು ಆಸಕ್ತಿ ತೋರುತ್ತಿವೆ. ಈಗಾಗಲೇ ಕೆಲ ಭಾಗಗಳಲ್ಲಿ ಕೈಗಾರಿಕೆಗಳು ಬಂದಿವೆ. ಮುಂದಿನ ದಿನಗಳಲ್ಲಿ ಸ್ಥಾಪನೆಯಾಗಲಿರುವ ಕೈಗಾರಿಕೆಗಳಿಗೆ ಗುಂಡ್ಲುಪೇಟೆಯ ಜಿಟಿಟಿಸಿಯಿಂದಲೇ ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲ ಸಿಗಲಿದೆ. ಇದರಿಂದ ಜಿಲ್ಲೆಯ ಒಟ್ಟಾರೆ ಆಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಕೇಂದ್ರದಲ್ಲಿ ಪ್ರಸ್ತುತ 199 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಈ ವರ್ಚುಯಲ್ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಡಿಸಿಎಂ ಜತೆಗೆ, ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಭಾಗಿಯಾಗಿದ್ದರೆ, ಗುಂಡ್ಲುಪೇಟೆಯಿಂದ ಜಿಟಿಟಿಸಿ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದರು.
ದೀರ್ಘಾವಧಿ-ಅಲ್ಪಾವಧಿ ತರಬೇತಿ: ಕೌಶಾಲ್ಯಾಭಿವೃದ್ಧಿಯಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿ ಕಾಲದ ತರಬೇತಿಯನ್ನು ನೀಡುತ್ತಿರುವ ಇವೆರಡೂ ಕೇಂದ್ರಗಳಲ್ಲಿ ನಾಲ್ಕು ವರ್ಷದ ಡಿಪೆÇ್ಲಮೋ ಇನ್ ಟೂಲ್ಸ್ ಅಂಡ್ ಡೈ ಮೇಕಿಂಗ್, ಡಿಪೆÇ್ಲಮೋ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ಕೋರ್ಸುಗಳಿವೆ. ಅದೇ ರೀತಿ ಅಲ್ಪಾವಧಿಯ ಸಿಎನ್ಸಿ ಪೆÇ್ರೀಗ್ರಾಮಿಂಗ್ ಮತ್ತು ಆಪರೇಷನ್, ಕ್ಯಾಡ್ ಅಂಡ್ ಕಾಂ, ಟರ್ನರ್, ಫಿಟ್ಟರ್, ಟೂಲ್ಸ್ ಅಂಡ್ ಮೆಷಿನಿಸ್ಟ್ ಮತ್ತು ಸಿಎಂಎಂ ಕೋರ್ಸುಗಳಿವೆ.