ಸರ್ಕಾರದ ಸವಲತ್ತು ಜನ ಸಾಮಾನ್ಯರ ಮನೆಗೆ ತಲುಪಿಸುವ ಕೆಲಸ ಕಾರ್ಯಕರ್ತರದು-ಶ್ರೀವತ್ಸ

ಮೈಸೂರು, ಅ. 22- ಸರ್ಕಾರದ ಸವಲತ್ತುಗಳನ್ನು ಜನ ಸಾಮನ್ಯರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್. ಶ್ರೀವತ್ಸರವರು ಹೇಳಿದರು.
ನಗರದ ಭಾರತೀಯ ಜನತಾ ಪಾರ್ಟಿಯ ಕಾರ್ಯಲಯದಲ್ಲಿ ಗುರುವಾರ ಹಿಂದುಳಿದ ವರ್ಗಗಳ 188 ಸಣ್ಣ ಸಣ್ಣ ಜಾತಿಯ ಪ್ರತಿನಿಧಿಗಳಾಗಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ನೇತೃತ್ವದ ಸರ್ಕಾರವಿದ್ದು ಸರ್ಕಾರದ ಸವಲತ್ತುಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತೆಗೆದು ಕೊಂಡು ಹೊಗುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದರು.
ಓ.ಬಿ.ಸಿ.ಅಧ್ಯಕ್ಷ ಜೋಗಿ ಮಂಜು ಮಾತನಾಡಿ, ಮೈಸೂರು ನಗರದ ನಾಲ್ಕು ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರು ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗಬೇಕು. ಹಿಂದುಳಿವ ವರ್ಗದವರಿಗೆ ಕುಲ ಕಸುಬು ಇದ್ದು ಅತಿ ಹೆಚ್ಚು ಜನ ಅಸಂಘಟಿತ ವಲಯದಲ್ಲಿ ಇರುತ್ತಾರೆ. ಇಂತಹ ವ್ಯಕ್ತಿಗಳನ್ನು ಗುರುತಿಸಿ ಸರ್ಕಾರದ ಸವಲತ್ತುಗಳನ್ನು ಕೊಡಿಸಬೇಕು ಎಂದು ಹೇಳಿದರು.
ಪಂಡಿತ್ ದೀನ ದಯಾಳ್ ಹಾಗೂ ಶ್ಯಾಂ ಪ್ರಸಾದ್ ಮುಖರ್ಜಿ ಹಾಗೂ ಭಾರತ ಮಾತೆ ಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಯನ್ನು ಪ್ರಾರಂಭಿಸಲಾಯಿತು.
ರಾಜ್ಯ ಓ.ಬಿ.ಸಿ.ಪ್ರಧಾನ ಕಾರ್ಯದರ್ಶಿಗಳಾದ ವಿವೇಕಾನಂದ ಡಬ್ಬಿ, ಸುರೇಶ್ ಬಾಬಣ್ಣ, ಕಾರ್ಯದರ್ಶಿ ಕೊಟ್ರೇಶ್, ಜಯದೇವ್, ಉಸ್ತುವಾರಿ ಹರ್ಷ, ಪ್ರಧಾನಕಾರ್ಯದರ್ಶಿ ಸೋಮಸುಂದರ್, ವಾಣೀಶ್, ಗೋಪಾಲ್, ಮಣಿರತ್ನಂರವರುಈ ಸಭೆಯಲ್ಲಿ ಇದ್ದರು.