ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕಾನೂನು ಸುವ್ಯವಸ್ಥೆಗೆ ಹೆಸರಾದ ಪೆÇಲೀಸ್ ಠಾಣೆಗಳಲ್ಲಿ ಇಡಲಾದ ವಿಸಿಟರ್ (ಸಂದರ್ಶಕರ) ಪುಸ್ತಕ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದಿಯೆ ಎಂಬ ಅನುಮಾನ ಮೂಡಿದೆ.
ಚಾಮರಾಜನಗರದ ಠಾಣೆಗಳಲ್ಲಿ ಸಂದರ್ಶಕರ ಪುಸ್ತಕಗಳನ್ನು ದಕ್ಷ ಪೆÇಲೀಸ್ ಅಧಿಕಾರಿ ದಿವಗಂತ ಮಧುಕರ್ ಶೆಟ್ಟಿ ಅವರು ಜಾರಿಗೆ ತಂದರು..
ನಂತರದ ದಿನಗಳಲ್ಲಿ ಕಟ್ಟು ನಿಟ್ಟಾಗಿ ಕುಲದೀಪ್ ಕುಮಾರ್ ಜೈನ್ ಹೊರತು ಪಡಿಸಿದರೆ ಅಷ್ಟು ಕಟ್ಟು ನಿಟ್ಟಾಗಿ ನಿರ್ವಹಣೆ ಮಾಡಲಿಲ್ಲ ಎಂದರೆ ತಪ್ಪಾಗಲಾರದು.
ಸಾರ್ವಜನಿಕರು ಠಾಣೆಗೆ ಬಂದಾಗ ಯಾರು, ಏತಕ್ಕಾಗಿ, ಯಾರನ್ನ ನೋಡಲು ಬಂದಿದ್ದರು ಎಂಬುದನ್ನ ಒಂದೆಡೆ ಬರೆದಿಡುವ ಪುಸ್ತಕವೆ ವಿಸಿಟರ್ ಪುಸ್ತಕ.
ಕುಲದೀಪ್ ಕುಮಾರ್ ಜೈನ್ ಅವರು ವರ್ಗಾವಣೆಯಾದ ನಂತರ ಸಿಸಿ ಕ್ಯಾಮೆರಾ, ವಿಸಿಟರ್ ಪುಸ್ತಕಗಳ ನಿರ್ವಹಣೆ ಅಷ್ಟ ಕಷ್ಟೆಯಾಗಿತ್ತು.
ಈಗ ಎಸ್ಪಿಯಾಗಿ ಬಂದ ದಿವ್ಯ ಅವರು ಸಿಸಿ ಕ್ಯಾಮರಾಗಳ ದುರಸ್ಥಿ ಪಡಿಸಿದ್ದಾರೆ. ಇನ್ನ ಅಪರಾಧ ಹೆಚ್ಚಾಗುವ ಕೆಲವೆಡೆ ಸಿಸಿ ಕ್ಯಾಮಾರಾ ಮತ್ತಷ್ಟು ಅಳವಡಿಸಬೇಕಾಗಿದೆ ಹಾಗೆಯೇ ಸಂದರ್ಶಕರ ಪುಸ್ತಕ ಕಟ್ಟು ನಿಟ್ಟಾಗಿ ನಿರ್ವಹಣೆ ಮಾಡಲು ಆದೇಶಿಸಬೇಕಾಗಿದೆ.
ಜಿಲ್ಲೆಯ ಠಾಣೆವೊಂದಕ್ಕೆ ಅರ್ಜಿ ನೀಡಲು ಮಧ್ಯಾಹ್ನ 3.10ಕ್ಕೆ ಹೋಗಿ 3.40 ಆದರೂ ಕೇಳುವವರು, ನೋಡುವವರೆ ಇಲ್ಲದಂತಾಗಿತ್ತು.
ಅರ್ಜಿ ಪಡೆಯಲು ಯಾರೂ ಇರಲಿಲ್ಲವೆ ಎಂಬ ಅನುಮಾನ ಕಾಡಿದರೂ ಎಲ್ಲವನ್ನೂ ಇಲಾಖೆಯ ಸಿ.ಸಿ.ಕ್ಯಾಮೆರಾವೆ ಸತ್ಯ ಹೇಳಬೇಕಾಗಿದೆ.
ಎಸ್ಪಿ ದಿವ್ಯ ಅವರ ಗಮನಕ್ಕೆ ತಂದಾಗ ಎಲ್ಲಾ ಠಾಣೆಗಳಲ್ಲೂ ವಿಸಿಟರ್ ಪುಸ್ತಕ ಇದೆ ಎಂದು ತಿಳಿಸಿದರು. ಆದರೆ ಅದರ ನಿರ್ವಹಣೆ ಹೇಗಾಗುತ್ತಿದೆ ಎಂಬ ಸತ್ಯ ತಿಳಿಯಲು ಅರ್ಜಿ ಸ್ವೀಕರಿಸಲು ಠಾಣೆಗೆ ಅರ್ಧ ಗಂಟೆ ಬೇಕಾಗಿತ್ತಾ..?
ಕೇವಲ ಒಂದು ಮಾಹಿತಿ ಹಕ್ಕಿನ ಅರ್ಜಿಗೆ ಸಹಿ ಮೊಹರು ಹಾಕಿಕೊಡಲು ಮೀನಾಮೇಷವೇಕೆ? ಅಧಿಕಾರಿಗಳ ನಿರ್ಲ್ಯಕ್ಷ್ಯ ಅಲ್ಲದೇ ಮತ್ತೇನು ಹೇಳಿ? ಒಟ್ಟಾರೆ ಆ ಸಂದರ್ಶಕರ ಪುಸ್ತಕ ಬರೆದುಕೊಂಡು ಕೂರೋದೆ ನಮ್ಮ ಕೆಲಸವೇ ಎಂಬಂತೆ ಸುಮ್ಮನಾಗಿರುವ ಕೆಲ ಸಿಬ್ಬಂದಿಗಳು ಪಡೆಯುವ ಸರ್ಕಾರಿ ಸಂಬಳದ ಗೌರವ ಕಾಯಬೇಕಲ್ಲವೇ? ಎಂಬುದು ಪ್ರಶ್ನೆ ಆಗಿದೆ.