ಮೈಸೂರು: ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಏರ್ಪಡಿಸಲಾಗಿದ್ದ ಸೆಲ್ಫಿ ಸ್ಪರ್ಧಾ ವಿಜೇತರ ಹೆಸರನ್ನು ಪ್ರಕಟಿಸಲಾಗಿದೆ.
ಪ್ರಥಮ ಬಹುಮಾನವನ್ನು ಹಿರಿಯ ರೈಲ್ವೆ ಅಧಿಕಾರಿ ಗೋಪಿನಾಥ್ ಮಲ್ಯ ಮತ್ತು ದ್ವಿತೀಯ ಬಹುಮಾನವನ್ನು ಖಾಸಗಿ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಿಸ್ ಪ್ರತ್ಯುಗ್ಕ್ಷ ವಿಜಯ್ ಅವರು ಪಡೆದಿದ್ದಾರೆ.
ಬಹುಮಾನವನ್ನು ಸಂಗ್ರಹಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹುಬ್ಬಳ್ಳಿಯ ಎಸ್.ಡಬ್ಲ್ಯು.ಆರ್.ಡಬ್ಲ್ಯು.ಡಬ್ಲ್ಯೂ.ಒ. ಅಧ್ಯಕ್ಷರಾದ ಸುಜಾತಾ ಸಿಂಗ್ ವಿತರಿಸಿದರು.
2ನೇ ಬಹುಮಾನ ಗೆದ್ದ ಪ್ರತ್ಯುಗ್ಕ್ಷ ಅವರು, ಮ್ಯೂಸಿಯಂ ನನ್ನ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ ಮತ್ತು ನಾನು ಇಲ್ಲಿಗೆ ಸದಾ ಭೇಟಿ ನೀಡುತ್ತೇನೆ ಎಂದು ಹೇಳಿದರು.
ಸಂಗ್ರಹಾಲಯದ ವ್ಯಾಪ್ತಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹೆಚ್ಚಿಸಲು ಸೆ. 1ರಿಂದ ಸೆ. 30ರ ವರೆಗೆ ಒಂದು ತಿಂಗಳ ಕಾಲ ಸೆಲ್ಫಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದಕ್ಕೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದ್ದರು.
ಫೇಸ್‍ಬುಕ್, ಟ್ವಿಟರ್ ಮತ್ತು ಇನ್‍ಸ್ಟಾಗ್ರಾಮ್‍ನಂತಹ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ 50ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.