ಯೋಗ ಪ್ರಜ್ಞೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅವಶ್ಯಕ -ಕೆ ರಘುರಾಂ ವಾಜಪೇಯಿ

ಮೈಸೂರು: ಯೋಗ ಪ್ರಜ್ಞೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅವಶ್ಯಕ ಎಂದು ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ತಿಳಿಸಿದರು.
ನಗರದ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ನಾಡಹಬ್ಬ ಶರನ್ನವರಾತ್ರಿ ಪ್ರಯುಕ್ತ ಪಾರಂಪರಿಕ ಯೋಗ ಸಾಧಕರ ಮಹೋತ್ಸವ 2020ರ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಒಬ್ಬ ಯೋಗಿ ಸಾಧನೆಯಲ್ಲಿ ಉನ್ನತ ಸ್ಥಾನಕ್ಕೆ ತಲುಪಬಲ್ಲನಲ್ಲದೆ ರಾಮ ರಾಜ್ಯವನ್ನಾಗಿ ಮಾಡಲು ಸಹಕರಿಸುತ್ತದೆ ಎಂದರು.
ಮೈಸೂರು ಯೋಗ ಪರಂಪರೆಯ ಕಾಶಿ ಇದ್ದಂತೆ, ಶ್ರೀ ಕೃಷ್ಣ ಮಹಾರಾಜಚಾರ್ಯರಿಂದ ಆರಂಭಗೊಂಡ ಈ ಪರಂಪರೆ ಇಂದಿನ ಆಧುನಿಕ ಯೋಗ ಚಾರ್ಯರು ಮುಂದುವರಿಸಿಕೊಂಡು ಉಳಿಸಿಕೊಂಡು ಹೋಗುತ್ತಿದ್ದಾರೆಂದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮಾತನಾಡಿ, ಜಗತ್ತು ಸ್ವಾಸ್ಥ್ಯವಾಗಿರಬೇಕಾದರೆ ಪತಂಜಲಿ ಮಹರ್ಷಿ ನೀಡಿದ ಯೋಗಶಾಸ್ತ್ರ ಅನಿವಾರ್ಯವಾಗಿದೆ ಎಂದರು.
ಧ್ಯಾನ ಇವುಗಳನ್ನು ಅಳವಡಿಸಿಕೊಳ್ಳುವುದರಿಂದ ಇಡೀ ಜಗತ್ತೇ ಸ್ವಾಸ್ಥ್ಯವಾಗಿರಬಲ್ಲದು. ಜಗತ್ತು ಇಂದು ಎದುರಿಸುತ್ತಿರುವ ಕೊರೊನಾ ಪಿಡುಗುನಿಂದ ಪಾರಾಗಲು ಯೋಗ ಸರ್ವ ಸೂಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿ ಎಸ್ ಎಸ್ ಯೋಗಾ ಫೌಂಡೇಶನ್ ಅಧ್ಯಕ್ಷ ಶ್ರೀಹರಿ ದ್ವಾರಕನಾಥ್ ಮಾತನಾಡಿ, ಒಬ್ಬ ಯೋಗ ಸಾಧಕ ಆಸನ ಪ್ರಾಣಾಯಾಮ ಮಾಡಲು ಅವಶ್ಯವಿರುವ ಭೂಮಿಕೆ ನಿರ್ಮಾಣ ವಾಗಬೇಕಾದರೆ ಮೈಸೂರಿನಲ್ಲಿ ಹಸಿರೀಕರಣ ಯೋಜನೆ ಅನುಷ್ಠಾನವಾಗಬೇಕು ಎಂದರು.
ಶ್ರೀ ಕೃಷ್ಣ ಕುಟೀರ ಯೋಗ ವನಸಿರಿ ಆಶ್ರಮ ಹಾಗೂ ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂಬರ್ 51ರ ಸಹಯೋಗದೊಂದಿಗೆ ಮಹರ್ಷಿ ಪತಂಜಲಿ ಧ್ಯಾನ ಮಂದಿರ ಲೋಕಾರ್ಪಣೆ, ದಸರಾ ಗೊಂಬೆ ಪ್ರದರ್ಶನ ಹಾಗೂ ಮೈಸೂರು ಯೋಗ ಪರಂಪರೆಯ ಛಾಯಾಚಿತ್ರ ಪ್ರದರ್ಶನ ಆರೋಗ್ಯ ಕಿರಣ ಮಾಸಪತ್ರಿಕೆ ದಸರಾ ಸಂಚಿಕೆ ಬಿಡುಗಡೆ ಮತ್ತು ಯೋಗ ಸಾಧಕರಿಗೆ ಯೋಗ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು
ಯೋಗ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿದ ನಾಗಭೂಷಣ್, ಡಾ. ಕೆ ಲೀಲಾ ಪ್ರಕಾಶ್, ಡಾ. ಪಿ ಆರ್ ವಿಶ್ವನಾಥ್ ಶೆಟ್ಟಿ, ಎಂ ಸಿ ರಮೇಶ್ ಬಾಬು, ಎಂ ಶ್ರೀನಿವಾಸ್, ಎಂ ಆರ್. ಜಲಯೋಗಿ, ಎಂ ಎಸ್ ಶೀಲ ರತ್ನ , ಡಾ. ಜಿ ಶ್ರೀನಾಥ್ ರವರಿಗೆ ಯೋಗ ಸೇವಾ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ದಿವ್ಯ ಸಾನಿಧ್ಯವನ್ನು ಶ್ರೀ ಇಳೈ ಆಳ್ವಾರ್ ಸ್ವಾಮೀಜಿವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ನಗರ ಪಾಲಿಕಾ ಸದಸ್ಯ ಬಿ ವಿ ಮಂಜುನಾಥ್, ಹಿರಿಯ ಸಮಾಜ ಸೇವಕರಾದ ಪುಷ್ಪಾ ಅಯ್ಯಂಗಾರ್, ಶ್ರೀ ಕೃಷ್ಣ ಕುಟೀರ ಯೋಗ ವನಸಿರಿ ಆಶ್ರಮದ ಸಂಸ್ಥಾಪಕ ಯೋಗಪ್ರಕಾಶ್, ಸಂಚಾಲಕ ಎನ್ ಅನಂತ, ಯುವ ಮುಖಂಡ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ನಾಗೇಂದ್ರಬಾಬು ಹಾಗೂ ಇನ್ನಿತರರು ಉಪಸ್ಥಿತರಿದ್ದರು.