ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ನಗರದ ರಾಮಸಮುದ್ರ ಬಡಾವಣೆಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವ ಸಂಬಂಧ ಜಾಗೃತಿ ಮೂಡಿಸುವ ಜನಾಂದೋಲನಾ ಕಾರ್ಯಕ್ರಮ ನಡೆಯಿತು.
ಚಾಮರಾಜ ನಗರ ಪಟ್ಟಣ ಠಾಣೆಯ ಎಎಸ್‍ಐ ದೊರೆಸ್ವಾಮಿ, ಮುಖ್ಯಪೇದೆ ಕುಮಾರ್, ಮಹಿಳಾ ಪೇದೆ ನೂರ್ ಹರ್ಶೀಯಾ ಅವರು ಸಿಬ್ದಂದಿಗಳೊಡಗೂಡಿ ಕಾರ್ಯಕ್ರಮ ನಡೆಸಿಕೊಟ್ಟರು.
ರಾಮಸಮುದ್ರದ ಕುರುಬರ ಬೀದಿಯಲ್ಲಿ ಶನಿವಾರ ನಡೆದ ಜನಾಂದೋಲನ ಕಾರ್ಯಕ್ರಮ ಬೀದಿಯ ಹುಚ್ಚೇಗೌಡ ನೇತೃತ್ವದಲ್ಲಿ ನಡೆಯಿತು.
ಬೀದಿಯಲ್ಲಿರುವ ಮಾಸ್ಕ್ ದಾಸ್ತಾನು 6 ಅಂಗಡಿಗಳಿಗೆ ಭೇಟಿ ಮಾಡಲಾಯಿತು. ಇದೇ ಸಂದರ್ಭದಲ್ಲಿ 5 ಜನರಿಗೆ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಸಿ ಅದರ ಬಗ್ಗೆ ಅರಿವು ಮೂಡಿಸಿದರು.
ಇದೇ ಬೀದಿಯಲ್ಲಿ 25ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.