ಮೈಸೂರು: ಸಿನಿಮಾ ನಿರ್ದೇಶಕ, ನಿರ್ಮಾಪಕ, ಕಲಾ ನಿರ್ದೇಶಕರಾಗಿದ್ದ ಜಿ. ಮೂರ್ತಿ ಅವರು ಶನಿವಾರ ನಿಧನರಾಗಿದ್ದಾರೆ. ಶುಕ್ರವಾರ ಸಂಜೆಯಷ್ಟೆ ಮಾತಾಡಿ ಲವಲವಿಕೆಯಿಂದಿದ್ದ ಅವರ ಸಿನಿಮಾ ಮುಂದಿನ ತಿಂಗಳು ಶುರುವಾಗುತ್ತಿತ್ತು. ಸ್ಕ್ರಿಪ್ಟ್ ಕೊಟ್ಟಿದ್ದೆ, ಹಾಡು ಕೊಡುವುದು ಬಾಕಿ ಇತ್ತು ಎಂದು ಚಿತ್ರ ನಿರ್ದೇಶಕ ಸತ್ಯಲಿಂಗರಾಜು ತಿಳಿಸಿದ್ದಾರೆ.
ಇಪ್ಪತ್ತೈದಕ್ಕು ಹೆಚ್ಚು ವರ್ಷದಿಂದ ಜತೆಗಿದ್ದವರು. ಸಿನಿಮಾ ಮೀರಿದ ಬಾಂಧವ್ಯ ವರೊಂದಿಗಿತ್ತು. ವಾರಕ್ಕೆರಡು ಸಲ ಮಾತಾಡದೆ ಇರುತ್ತಿರಲಿಲ್ಲ. ಬರೀ ಸಿನಿಮಾ ವಿಚಾರವೇ ವಿಷಯವಾಗಿರುತ್ತಿತ್ತು ಎಂದು ಸತ್ಯಲಿಂಗರಾಜು ನೊಂದು ನುಡಿದಿದ್ದಾರೆ.
ಕಲಾ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ, ಉತ್ತಮ ಸಿನಿಮಾ ಪ್ರಶಸ್ತಿಗಳನ್ನೆಲ್ಲ ತನ್ನ ಮನೆ ಗೋಡೆಗೆ ತಗುಲಿಹಾಕಿದ್ದ ಮೂರ್ತಿ ಅವರ ಫೆÇೀಟೋವೂ ಅದೇ ಸಾಲಿಗೆ ಸೇರುತ್ತಿದೆ ಎಂಬುದು ನೋವಿನ ಸಂಗತಿ ಎಂದು ಅವರು ಸಂತಾಪ ಸೂಚಿಸಿದ್ದಾರೆ.