ಮೈಸೂರು: ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ನಗರದ ಮೈಸೂರಿನ ಸರಸ್ವತಿಪುರಂ ಠಾಣಾ ಪೆÇಲೀಸರು ಯಶಸ್ವಿಯಾಗಿದ್ದಾರೆ.
ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಅವರನ್ನ ಸುಫಾರಿ ಕೊಟ್ಟು ಹತ್ಯೆಗೈದಿದ್ದ ಮೂವರು ಶಿಕ್ಷಕರು ಸೇರಿ ಐದು ಮಂದಿ ಹಂತಕರು ಪೆÇಲೀಸರ ಸೆರೆಯಾಗಿದ್ದಾರೆ.
ವಿಶ್ವ ಚೇತನ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ವಿಶ್ವನಾಥ್, ಸುಫಾರಿಗೆ ಮಧ್ಯಸ್ಥಿಕೆ ವಹಿಸಿದ್ದ ಮಡಿವಾಳಸ್ವಾಮಿ, ಸಂಸ್ಕೃತ ಪಾಠಶಾಲೆ ಮುಖ್ಯಶಿಕ್ಷಕ ಸಿದ್ದರಾಜು, ಸಹ ಶಿಕ್ಷಕ ಪರಶಿವ, ಗಾರೆ ಮೇಸ್ತ್ರಿ ನಿರಂಜನ್, ಐಡಿಎಫ್ ಸಿ ಬ್ಯಾಂಕ್ ರಿಕವರಿ ಆಫೀಸರ್ ನಾಗೇಶ್ ಬಂಧಿತ ಆರೋಪಿಗಳು.
ನಗರದ ಶಾರದಾದೇವಿ ನಗರದಲ್ಲಿ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಅವರ ಕೊಲೆ ಸೆ. 20ರಂದು ನಡೆದಿತ್ತು. ಸಂಬಳದಲ್ಲಿ ಹಣ ನೀಡುವಂತೆ ಪರಶಿವಮೂರ್ತಿ ನೀಡುತ್ತಿದ್ದ ಕಿರುಕುಳದಿಂದಾಗಿ ಬೇಸತ್ತು ಆರೋಪಿ ಶಿಕ್ಷಕರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.