ಕ್ಯಾಪ್ಟನ್ ಅಭಿಮನ್ಯು ಗಜಪಡೆಗೆ ಬೀಳ್ಕೊಡುಗೆ

ಮೈಸೂರು: ನಾಡಹಬ್ಬ ದಸರಾ ಸಮಾರಂಭದಲ್ಲಿ ಭಾಗಿಯಾಗಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ನಾಡಿನಿಂದ ಕಾಡಿನತ್ತ ಹೊರಟವು.
ಅಭಿಮನ್ಯು, ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳಿಗೆ ಬುಧವಾರ ಪೂಜೆ ಸಲ್ಲಿಸಿ ನಂತರ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜ ಪಡೆ ಯಶಸ್ವಿಯಾಗಿ ಈ ಬಾರಿ ದಸರಾದ ಆಕರ್ಷಣೆಯಾದ ಜಂಬೂಸವಾರಿಯನ್ನು ನಡೆಸಿಕೊಟ್ಟಿದ್ದವು.
ಎಲ್ಲಾ 5 ಆನೆಗಳು ಲಾರಿ ಮೂಲಕ ಆನೆ ಶಿಬಿರಗಳತ್ತ ತೆರಳಿದವು.