ಸಸಿ ನೆಡುವ ಮೂಲಕ ಈದ್ ಆಚರಣೆ

ಮೈಸೂರು: ನಗರದ ಕೃಷ್ಣರಾಜ ಸ್ನೇಹ ಬಳಗ ವತಿಯಿಂದ ಈದ್ ಮಿಲಾದ್ ಅಂಗವಾಗಿ ಹಿಂದೂ ಮುಸ್ಲಿಮರು ಜತೆಗೂಡಿ ಸಸಿ ನೆಡುವ ಮೂಲಕ ಸಹಬಾಳ್ವೆ ಕಾರ್ಯಕ್ರಮವನ್ನು ನಗರದ ಕುವೆಂಪು ನಗರದಲ್ಲಿರುವ ಸೌಗಂಧಿಕ ಉದ್ಯಾನವನದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ಎನ್ ಎಂ ನವೀನ್ ಕುಮಾರ್, ಕೊರೊನಾಕ್ಕೆ ಎಲ್ಲ ವರ್ಗದವರು ತುತ್ತಾಗಿದ್ದಾರೆ. ಹಾಗಾಗಿ ಸಾರ್ವಜನಿಕರು ಆದಷ್ಟು ಪದೇ ಪದೇ ಕೈ ತೊಳೆಯುವುದು, ಮಾಸ್ಕ್ ಧರಿಸುವುದು, ಅಂತರ ಕಾಪಾಡುವ ಮೂಲಕ ಕೊರೊನಾ ನಿಯಂತ್ರಿಸಬೇಕೆಂದರು.
ಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ಅವರು ಮಾತನಾಡಿ, ಶಾಂತಿ, ಸಹಬಾಳ್ವೆ ಎಲ್ಲ ಧರ್ಮಗಳ ತಿರುಳಾಗಿದೆ. ಮಾನವೀಯ ಮೌಲ್ಯಗಳ ಪಾಲನೆ ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಇಸ್ಲಾಂ, ಹಿಂದೂ, ಕ್ರಿಶ್ಚಿಯನ್ ಸೇರಿದಂತೆ ವಿವಿಧ ಧರ್ಮಗಳ ಮೂಲ ಗುರಿ ಮಾನವನ ಕಲ್ಯಾಣವೇ ಆಗಿದೆ ಎಂದರು.
ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಅಶೋಕಪುರಂ ಪೆÇಲೀಸ್ ಠಾಣೆಯ ಮುಖ್ಯಪೇದೆ ರಾಜೇಶ್, ಸಿದ್ದರಾಜು, ಸಾದಿಕ್ ರಹಮಾನ್, ಮೊಹಮ್ಮದ್ ಹ್ಯಾರಿಸ್, ಸೈಯದ್ ಅಬ್ಬಾಸ್, ರಫೀಕ ಆಲಿ, ರಫೀಕ್, ಹುಸೇನ್, ಸಾದಿಕ್, ಎಂ. ರಾಜೇಶ್, ಎಂಎಚ್ ಕಿರಣ್, ಸುನೀಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.