ಕನ್ನಡ ಧ್ವಜ ಜಾಗೃತಿ ಅಭಿಯಾನಕ್ಕೆ ಡಿಟಿ ಪ್ರಕಾಶ್ ರಿಂದ ಚಾಲನೆ

ಮೈಸೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಲು ಮೈಸೂರಿನ ಅಗ್ರಹಾರ ವೃತ್ತದ ಎಲ್ಲಾ ಅಂಗಡಿ, ಕಚೇರಿಗಳ ಮೇಲೆ ಕನ್ನಡ ಧ್ವಜ ಹಾಕಿಸುವ ಮೂಲಕ ಕನ್ನಡ ಧ್ವಜ ಜಾಗೃತಿ ಅಭಿಯಾನಕ್ಕೆ ಕರ್ನಾಟಕ ಸೇನಾಪಡೆಯ ವತಿಯಿಂದ ಚಾಲನೆ ನೀಡಲಾಯಿತು.
ಈ ವಿನೂತನ ಕಾರ್ಯಕ್ರಮಕ್ಕೆ ಸಮಾಜ ಸೇವಕರಾದ ಡಿ ಟಿ ಪ್ರಕಾಶ್ ಚಾಲನೆ ನೀಡಿ, ನಂತರ ಮಾತನಾಡಿದ ಅವರು ದೇಶದಲ್ಲಿ ಹರಿದು ಹಂಚಿ ಹೋಗಿದ್ದ ಭಾರತದ ಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ಸೇರಿಸಿ ಒಗ್ಗೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದವರು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಎಂದು ತಿಳಿಸಿದರು.
ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ, 1956ರಲ್ಲಿ ಕನ್ನಡ ಭಾಷೆ ಮಾತನಾಡುವ 4 ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿ, ಮೈಸೂರು ರಾಜ್ಯ ಎಂದು ಹೆಸರಿಸಲಾಗಿತ್ತು ಎಂದವರು ಹೇಳಿದರು.
ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ಮಾತನಾಡಿ, 1956ನೇ ನವಂಬರ್ 1ರಂದು ಕರ್ನಾಟಕ ರಾಜ್ಯ ಉದಯವಾಗಿ, ವಿಶಾಲ ಮೈಸೂರು ರಾಜ್ಯ ಎಂದು ಹೆಸರಾಗಿತ್ತು. ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಅನೇಕ ಮಹಾನ್ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಹೋರಾಟ ನಡೆಸಬೇಕಾಯಿತು ಎಂದು ತಿಳಿಸಿದರು. ಯುವ
ಡಾ. ರಾಜಕುಮಾರ್ ಅಭಿಮಾನಿಗಳ ಬಳಗದ ಸಂಸ್ಥಾಪಕ ಅಧ್ಯಕ್ಷ ಎಂ. ರಾಮೇಗೌಡ, ಯುವ ಮುಖಂಡರಾದ ಎನ್. ಎಂ. ನವೀನ್ ಕುಮಾರ್, ವಿಷ್ಣುವರ್ಧನ್ ಅಭಿಮಾನಿ ಬಳಗದ ಎಂ. ಡಿ. ಪಾರ್ಥಸಾರಥಿ, ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಕೆ. ಎಂ. ಪಿ. ಕೆ ಟ್ರಸ್ಟ್ ನ ವಿಕ್ರಮ್ ಅಯ್ಯಂಗಾರ್, ಡಾ. ಪಿ. ಶಾಂತರಾಜೇಅರಸ್, ವಿಜಯೇಂದ್ರ, ರವಿತೇಜ, ರಾಕೇಶ್ ಕುಂಚಿಟಿಗ, ಪ್ರಜೀಶ್, ಪ್ರಭುಶಂಕರ್, ಕುಮಾರ್ ಗೌಡ, ಬಂಗಾರಪ್ಪ, ಸ್ವಾಮಿ, ಪರಿಸರ ಚಂದ್ರು, ಶಾಂತಮೂರ್ತಿ, ನಂಜುಂಡಸ್ವಾಮಿ, ಗುರುಮಲ್ಲಪ್ಪ, ಆನಂದ್, ಮಲ್ಲೇಶ್, ಸುಂದರ್, ಸೋಮಶೇಖರ್ ಅವರುಗಳು ಈ ಜಾಗೃತಿ ಅಭಿಯಾನ ಸಂದರ್ಭದಲ್ಲಿ ಉಪಸ್ಥಿತರಿದ್ದರು.