ದಸರಾ ಖರ್ಚು ಮಾಹಿತಿ ನೀಡಿದ ಸಚಿವ ಎಸ್.ಟಿ. ಸೋಮಶೇಖರ್

ಮೈಸೂರು: ಈ ಬಾರಿಯ ಸರಳ ದಸರಾಕ್ಕೆ 2.91 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಗರದಲ್ಲಿ ಭಾನುವಾರ ಸಚಿವ ಎಸ್. ಟಿ. ಎಸ್. ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದಸರಾ ವೆಚ್ಚದ ಬಗ್ಗೆ ಮಾಹಿತಿ ನೀಡಿದರು.
ದಸರಾಕ್ಕಾಗಿ ರಾಜ್ಯ ಸರಕಾರ 10 ಕೊಟಿ ರೂ. ಬಿಡುಗಡೆ ಮಾಡಿತ್ತು. ಈ ಪೈಕಿ ಕೇವಲ 2.91 ಕೋಟಿ ರೂ. ಮಾತ್ರ
ಖರ್ಚಾಗಿದೆ ಎಂದರು.
ಮಂಡ್ಯ ದಸರಾಕ್ಕೆ 50 ಲಕ್ಷ ರೂ. ಮತ್ತು ಚಾಮರಾಜನಗರ ದಸರಾಗೆ 36 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದವರು ತಿಳಿಸಿದರು.
ಸಾಂಸ್ಕೃತಿಕ ದಸರಾ ನಿರ್ವಹಣೆ ಮತ್ತು ಕಲಾವಿದ ಸಂಭಾವನೆ 44,78,000. ದಸರಾ ಆನೆಗಳ ನಿರ್ವಹಣಾ ವೆಚ್ಚ 35 ಲಕ್ಷ, ದಸರಾ ಕಾರ್ಯಕ್ರಮ ಲೈವ್ ಸ್ಟ್ರೀಮಿಗ್ ಗೆ 5.90 ಲಕ್ಷ, ಸ್ಥಬ್ಧ ಚಿತ್ರ 4.10 ಲಕ್ಷ, ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿ, ಹೊಸದಾಗಿ ಯಾವುದೇ ಖರ್ಚು ಮಾಡಿಲ್ಲವೆಂದ ಅವರು, ಪ್ರತಿ ವರ್ಷದಂತೆ 40 ಲಕ್ಷ ರೂ. ಗಳನ್ನು ರಾಜವಂಶಸ್ಥರಿಗೆ ನೀಡಲಾಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಉಳಿದ ಹಣದ ಬಗ್ಗೆ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಗುವುದೆಂದು ಅವರು ಹೇಳಿದರು.
ಕಳೆದ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಸರಾ ಲೆಕ್ಕವನ್ನು ದಸರಾ ಆದ 1 ವಾರದಲ್ಲಿ ನೀಡಲಾಗಿದೆ.