ಮೈಸೂರು: ಅಂತರರಾಜ್ಯ ದಂತಚೋರ ಸೇರಿದಂತೆ ನಾಲ್ಕು ಮಂದಿಯನ್ನು ಮೈಸೂರು ಅರಣ್ಯ ಸಂಚಾರ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಅಂತರರಾಜ್ಯ ದಂತಚೋರ ತಿರುವನಂತಪುರದ ಪ್ರೆಸ್ಟಿನ್ ಸೆಲ್ವ, ಜಯಪ್ರಕಾಶ್ ಹಾಗೂ ನಗರದ ಉದಯಗಿರಿಯ ನಿವಾಸಿಗಳಾದ ಮೋಹನ್ ಮತ್ತು ರಮೇಶ್ ಬಂಧಿತ ಆರೋಪಿಗಳು.
ಬಂಧಿತರಿಂದ 25 ಕೆ.ಜಿ ತೂಕದ ಆನೆದಂತಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬನ್ನಿಮಂಪಟದ ಕೆಳಸೇತುವೆ ಬಳಿ ಬಂಧಿತರು 4 ಆನೆದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಒಂದು ಕೆ.ಜಿಗೆ 20 ಸಾವಿರ ರೂ.ನಂತೆ ಆನೆ ದಂತವನ್ನು ಬಂಧಿತರು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರೆಸ್ಟಿನ್ ಸೆಲ್ವ ವಿರುದ್ಧ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ರಮೇಶ್ ಮತ್ತು ಮೋಹನ್ ವಿಗ್ರಹ ಕೆತ್ತುವ ಕಲಾವಿದರು.
ಡಿಸಿಎಫ್ ಎ.ಟಿ. ಪೂವಯ್ಯ, ಎಸಿಎಫ್ ಸುವರ್ಣ, ಆರ್‍ಎಫ್‍ಒ ವಿವೇಕ್, ಸಿಬ್ಬಂದಿಗಳಾದ ಮೋಹನ್, ಲಕ್ಷ್ಮೀಶ್, ಸುಂದರ್, ಪ್ರಮೋದ್, ತುಷಾರಾ, ಸ್ನೇಹಾ, ಮೇಘನಾ, ಚನ್ನಬಸವಯ್ಯ, ಗೋವಿಂದ, ರವಿನಂದನ್ ಈ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.