ಮೈಸೂರು: ನಗರದಲ್ಲಿ 2 ಕಡೆ ಗುರುವಾರ ಬೆಳಗ್ಗೆ ಸರಗಳ್ಳತನ ನಡೆದಿದೆ.
ಎಂ.ಆರ್. ಅಶ್ವಿನಿ ಹಾಗೂ ಸುಷ್ಮ ಚಿನ್ನದ ಸರ ಕಳೆದುಕೊಂಡವರಾಗಿದ್ದಾರೆ.
ಮೇಟಗಳ್ಳಿ ಬಿಎಂಶ್ರೀ ನಗರದ ವಾಸಿ ಎಂ.ಆರ್. ಅಶ್ವಿನಿ (24) ಅವರು ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಇರುವ ಸರ್ಕಾರಿ ಅತಿಥಿ ಗೃಹದ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಇವರು ಧರಿಸಿದ್ದ 12 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಸರ ಕಿತ್ತುಕೊಳ್ಳುವ ವೇಳೆ ಅಶ್ವಿನಿ ಕೆಳಕ್ಕೆ ಬಿದ್ದಿದ್ದರು ಎಂದು ಪೆÇಲೀಸರು ತಿಳಿಸಿದ್ದಾರೆ.
ಈ ಬಗ್ಗೆ ನಜರ್ ಬಾದ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಟೆಲ್ ನಲ್ಲಿ ಕಾರ್ಯನಿರ್ವಹಿಸುವ ಸುಷ್ಮ (35) ಕೆಲಸಕ್ಕೆ ತೆರಳುವ ವೇಳೆ ಕಬೀರ್ ರೋಡ್ ಜಂಕ್ಷನ್ ಬಳಿ ಹಿಂದಿನಿಂದ ಬೈಕಿನಲ್ಲಿ ಬಂದ ವ್ಯಕ್ತಿ ಈಕೆ ಧರಿಸಿದ್ದ ಚಿನ್ನದ ಸರವನ್ನು ಎಗರಿಸಲು ಪ್ರಯತ್ನಿಸಿದ್ದು, ಈ ವೇಳೆ ಗಟ್ಟಿಯಾಗಿ ಚಿನ್ನದ ಸರವನ್ನು ಹಿಡಿದುಕೊಂಡು ಕಿರುಚಿದರು. ಆದರೂ ಸುಮಾರು 10 ಗ್ರಾಂ ನಷ್ಟು ಚಿನ್ನವನ್ನು ಕಳ್ಳ ಕಸಿದುಕೊಂಡು ಪರಾರಿಯಾಗಿದ್ದಾನೆ.
ಮಂಡಿ ಪೆÇಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.