4 ವರ್ಷದಿಂದ ತಲೆ ಮರೆಸಿಕೊಂಡಿದ್ದ ವಂಚಕನ ಬಂಧನ

ಮೈಸೂರು: ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಂಚಕನೊಬ್ಬನನ್ನು ನಗರದ ಉದಯಗಿರಿ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಪನ್ಮತ್ತಿ ಪಟ್ಟಣದ ಪಳನಿಮಲೈ ಬಂಧಿತ ಆರೋಪಿ.
ಬಂಧಿತನು ಗೋಡಂಬಿ ಇಂಪೆÇೀರ್ಟ್ ಎಕ್ಸಪೆÇೀರ್ಟ್ ಮಾಡುವ ನಗರದ ಉದಯಗಿರಿ ವಾಸಿ ರೋಮಾನ್ ಖಾನ್ ಅವರಿಗೆ 4 ವರ್ಷಗಳ ಹಿಂದೆ ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುವುದಾಗಿ 10 ಲಕ್ಷ ರೂ. ಹಣ ಪಡೆದು ಗೋಡಂಬಿಯನ್ನು ಕೊಡದೆ ಹಣವನ್ನೂ ಹಿಂದಿರುಗಿಸದೇ ವಂಚಿಸಿ ಪಳನಿ ಮಲೈ ತಲೆಮರೆಸಿಕೊಂಡಿದ್ದ.
ಎಸ್ಪಿಆರ್ ಕ್ಯಾಶ್ಯೂಸ್ ಎಂಬ ಕಂಪನಿ ನಡೆಸುತ್ತಿರುವ ಪಳನಿಮಲೈ ಮತ್ತು ಆತನ ಪತ್ನಿ ರಾಧಿಕಾ ಪಳನಿ ಮಲೈ ಅವರನ್ನು ರೋಮಾನ್ ಖಾನ್ ಸಂಪರ್ಕಿಸಿದ್ದರು.
ಗೋಡಂಬಿಯನ್ನು ಸರಬರಾಜು ಮಾಡುವುದಾಗಿ ಪಳನಿಮಲೈ ಆರ್.ಟಿ.ಜಿಎಸ್ ಮೂಲಕ 2016ರಲ್ಲಿ ಹತ್ತು ಲಕ್ಷರೂ.ಗಳನ್ನು ವರ್ಗಾಯಿಸಿಕೊಂಡಿದ್ದರು.
ರೋಮಾನ್ ಖಾನ್ ತಮಿಳುನಾಡು ರಾಜ್ಯದ ಪೆÇಲೀಸ್ ರನ್ನು ಭೇಟಿ ಮಾಡಿದಾಗ ಪಳನಿಮಲೈ ಓರ್ವ ರೂಢಿಗತ ಮೋಸಗಾರನಾಗಿದ್ದು, ಹಲವರಿಂದ ಇದೇ ರೀತಿ ಹಣ ಪಡೆದು ಗೋಡಂಬಿ ನೀಡದೆ ಮೋಸ ಮಾಡಿರುವ ಬಗ್ಗೆ ಪೆÇಲೀಸರು ತಿಳಿಸಿದ್ದಾರೆ.
ಉದಯಗಿರಿ ಠಾಣೆ ಪೆÇಲೀಸರು ನಾಲ್ಕು ವರ್ಷಗಳಲ್ಲಿ 6 ಬಾರಿ ತಮಿಳುನಾಡಿನ ಸೇಲಂಗೆ ಭೇಟಿ ನೀಡಿ ಹುಡುಕಾಟ ನಡೆಸಿದ್ದರೂ ಪೊಲೀಸರಿಗೆ ಈ ಆರೋಪಿ ಸಿಕ್ಕಿರಲಿಲ್ಲ. ಕೊನೆಗೂ ಉದಯಗಿರಿ ಠಾಣೆಯ ಪೆÇಲೀಸರ ತಂಡ ತಲೆಮರೆಸಿಕೊಂಡಿದ್ದ ಪಳನಿಯನ್ನು ಮೈಸೂರಿನಲ್ಲಿಯೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತನನ್ನು ಮೈಸೂರಿನ 2ನೇ ಎಎಫ್ ಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯವು ಪಳನಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಹಾಗೂ ಎಸಿಪಿ ಶಶಿಧರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೆÇಲೀಸ್ ಇನ್ಸಪೆಕ್ಟರ್ ಎಂ.ಎಂ.ಪೂಣಚ್ಚ, ಪಿಎಸ್ ಐ ಜಯಕೀರ್ತಿ, ನಟರಾಜನ್, ಮದನ್ ಕುಮಾರ್, ಸಿಬ್ಬಂದಿಗಳಾದ ವಿನೋದ್ ರಾಥೋಡ್, ರಾಜೇಶ್, ಕೃಷ್ಣ ಈ ವಂಚಕನನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.