ಹಂಪಿ: ಶಿಕ್ಷಣ ತಜ್ಞ, ಸಮಾಜ ಸೇವಕ ಡಾ. ವೂಡೇ ಪಿ.ಕೃಷ್ಣ ಹಾಗೂ ಹೆಸರಾಂತ ವೈದ್ಯ ಡಾ.ಹಣಮಂತಪ್ಪ ಗೋವಿಂದಪ್ಪ ದಡ್ಡಿ (ಎಚ್.ಎಂ.ದಡ್ಡಿ) ಅವರಿಗೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಷ್ಠಿತ ನಾಡೋಜ ಪುರಸ್ಕಾರವನ್ನು ಪ್ರದಾನ ಮಾಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಮಂಗಳವಾರ ನಡೆದ 20ನೇ ನುಡಿಹಬ್ಬದಲ್ಲಿ ಈ ಇಬ್ಬರು ಸಾಧಕರನ್ನು ಗೌರವಿಸಿದ ಡಿಸಿಎಂ, ಇದೇ ವೇಳೆ ಅರ್ಹ ವಿದ್ಯಾರ್ಥಿಗಳಿಗೆ ಪಿಎಚ್.ಡಿ, ಡಿ.ಲೀಟ್. ಹಾಗೂ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಿ ಶುಭ ಹಾರೈಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಹಾಗೂ ಸೀಮಿತ ಆಹ್ವಾನಿತರ ನಡುವೆ ನಡೆದ ಈ ಘಟಿಕೋತ್ಸವದಲ್ಲಿ ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತಿನ ನಿರ್ದೇಶಕ ಹಾಗೂ ವಿಶ್ರಾಂತ ಕುಲಪತಿ ಪೆÇ್ರ.ಎಸ್.ಸಿ.ಶರ್ಮ ಅವರು ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಡಾ.ಡಾ.ಸ.ಚಿ. ರಮೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಇದಕ್ಕೂ ಉಪ ಮುಖ್ಯಮಂತ್ರಿಗಳು ಹಂಪಿಯ ಜಗದ್ವಿಖ್ಯಾತ ವಿರೂಪಾಕ್ಷ ದೇಗುಲಕ್ಕೆ ತೆರಳಿ ಶ್ರೀ ವಿರೂಪಾಕ್ಷ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಆನಂದ್ ಸಿಂಗ್ ಅವರು ಉಪಸ್ಥಿತರಿದ್ದರು.