1 ಕೋಟಿ ರೂ. ಮೌಲ್ಯದ ನಿವೇಶನ ಮುಡಾ ವಶಕ್ಕೆ

ಮೈಸೂರು: ನಗರದ ನಾರ್ತ್ ಈಸ್ಟ್ ಆಫ್ ಎನ್.ಆರ್.ಮೊಹಲ್ಲಾದ ಹಳೇ ಬಡಾವಣೆಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಅಂದಾಜು 1 ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಮಂಗಳವಾರ ಪ್ರಾಧಿಕಾರವು ತೆರವುಗೊಳಿಸಿತು.
ಎನ್.ಆರ್.ಮೊಹಲ್ಲಾ ಹಳೇ ಬಡಾವಣೆಯಲ್ಲಿ ನಿ.ಸಂಖ್ಯೆ-537/ಕೆ ಮತ್ತು 537/ಎಲ್, 30×40 ಅಳತೆಯ ನಿವೇಶನಗಳನ್ನು ಮೋಸಿನ್‍ತಾಜ್ ಎಂಬುವವರು ನಕಲಿ ದಾಖಲೆ ಸೃಷ್ಠಿಸಿ ಮೈಸೂರು ಮಹಾನಗರಪಾಲಿಕೆಯಿಂದ ಖಾತೆ ಮಾಡಿಸಿಕೊಂಡು ನಿವೇಶನದ ಸುತ್ತಾ ಗೋಡೆ ನಿರ್ಮಿಸಿಕೊಂಡಿದ್ದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ನಿರ್ದೇಶನದ ಮೇರೆಗೆ ಮಂಗಳವಾರ ನರಸಿಂಹರಾಜ ಪೆÇಲೀಸ್ ಠಾಣೆಯ ಆರಕ್ಷಕ ಸಿಬ್ಬಂದಿಗಳ ಭದ್ರತೆಯೊಂದಿಗೆ ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ವಲಯ ಅಧಿಕಾರಿಗಳಾದ ಜಿ.ಮೋಹನ್, ಹೆಚ್.ಎನ್.ರವೀಂದ್ರಕುಮಾರ್, ಸರ್ವೇಯರ್ಗಳು ಹಾಗೂ ಸಂಬಂಧಪಟ್ಟ ಸಹಾಯಕ, ಕಿರಿಯ ಅಭಿಯಂತರುಗಳು ಹಾಜರಿದ್ದರು.