ಮೈಸೂರು: ಭೇಟಿಯಾದ ಮೊದಲ ದಿನವೇ ಗಂಟೆಗಟ್ಟಲೆ ಮಾತು, ಬಹುವರ್ಷಗಳಿಂದ ಆತ್ಮೀಯರೆಂಬಂತೆ ಭಾವನಾತ್ಮಕವಾಗಿ ಹೇಳಿದ್ದೆಲ್ಲ ನೆನಪಿವೆ.
‘ಹಾಯ್ ಬೆಂಗಳೂರ್’ ನಲ್ಲಿ ನಾನು ವರದಿಗಾರನಾಗಿದ್ದು ಕೆಲ ತಿಂಗಳು ಮಾತ್ರ.
ಪ್ರತೀ 5 ತಾರೀಕಿನೊಳಗೆ ಚೆಕ್ ಅಂಚೆಯಲ್ಲಿ ಬಂದಿರುತ್ತಿತ್ತು. ಓಡಾಟ, ಊಟ, ವಾಸ್ತವ್ಯದ ಖರ್ಚು… ಇವೆಲ್ಲ ಯಾಕಿಷ್ಟು ಎಂದು ಕೇಳಿದ್ದೇ ಇಲ್ಲ. ಹಾಯ್ ಬೆಂಗಳೂರ್‍ಗೆ, ಸುದ್ದಿ ಮೂಲವಾಗಿ ಜನರಿಂದ ಬರುತ್ತಿದ್ದ ಪತ್ರ, ದಾಖಲೆಗಳು ಬೇರಿನ್ನಾವ ಪತ್ರಿಕೆಗೂ ಬರುತ್ತಿರಲಿಲ್ಲ. ಕಂತೆಗಟ್ಟಳೆ ಪೆÇೀಸ್ಟ್ ಬರುತ್ತಿತ್ತು. ಬರವಣಿಗೆಯಲ್ಲಿ ದೈತ್ಯರಾಗಿದ್ದ ರವಿ ಬೆಳಗೆರೆ ಅವರಿಗೆ, ಅಂತಿಮ ನಮನ.
-ಜಿ.ಆರ್.ಸತ್ಯಲಿಂಗರಾಜು