ಮೈಸೂರು: ಅರಿವು ಸಂಸ್ಥೆಯ ವತಿಯಿಂದ ಪಟಾಕಿ ತ್ಯಜಿಸಿ ದೀಪ ಬೆಳಗಿಸಿ ಎಂಬ ಜನ ಜಾಗೃತಿ ಕಾರ್ಯಕ್ರಮವನ್ನು ನಗರದ ಚಾಮುಂಡಿಪುರಂ ವೃತ್ತದಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ, ದೀಪಾವಳಿ ಸಂದರ್ಭದಲ್ಲಿ ಮನೆಯ ಹೊರಗೂ ಮತ್ತು ಒಳಭಾಗದಲ್ಲಿ ಕೂಡ ಮಣ್ಣಿನ ಹಣತೆಯಲ್ಲಿ ದೀಪ ಬೆಳಗುವುದೇ ಶ್ರೇಷ್ಠ ಎಂದು ಮನೆ ಮನೆಗೂ ತೆರಳಿ ಹಣತೆ ವಿತರಿಸಿ ತಿಳಿಸಿದರು.
ಕಳೆದ 10ವರ್ಷದಿಂದ ನಿರಂತರವಾಗಿ ಅರಿವು ಸಂಸ್ಥೆ ಮಾಡುತ್ತಿರುವುದು ಈ ಕಾರ್ಯ ಶ್ಲಾಘನೀಯ ಎಂದರು.
ನಂತರ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ದೀಪಾವಳಿ ಹಬ್ಬದಂದು ಎಲ್ಲರೂ ದೀಪಗಳನ್ನು ಹಚ್ಚುವುದರ ಮೂಲಕ ಪರಿಸರ ಸಂರಕ್ಷಣೆ ಮಾಡುವ ಮೂಲಕ ದೀಪಾವಳಿ ಆಚರಿಸಿ, ಪಟಾಕಿಗಳನ್ನು ಸಿಡಿಸದೇ ಪರಿಸರ ಕಾಪಾಡಬೇಕು ಎಂದು ಜನತೆಗೆ ಕರೆಯಿತ್ತರು.
ನಂತರ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ, ಕೋವಿಡ್ ರೋಗದ ತೀವ್ರತೆಗೆ ಕಾರಣವಾಗುವ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕಾದುದು ಸರ್ಕಾರದ ಆದ್ಯತೆಯಾಗಬೇಕು ಎಂದರು.
ನಂತರ ಚಾಮುಂಡಿಪುರಂ ಸುತ್ತಮುತ್ತಲಿನಲ್ಲಿರುವ ಮನೆ ಮನೆಗೆ ಹಣತೆ ವಿತರಿಸುವ ಮೂಲಕ ವಿಶೇಷವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಅರಿವು ಸಂಸ್ಥೆ ಅಧ್ಯಕ್ಷ ಶ್ರೀಕಾಂತ ಕಶ್ಯಪ್, ಉದ್ಯಮಿ ಅಪೂರ್ವ ಸುರೇಶ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, iÉೂೀಗೇಶ್ ನಾಯ್ಡು, ಸಿದ್ದೇಶ್, ವಿನಯ್ ಕಣಗಾಲ್, ರಾಜೇಶ, ಜೋಗಿ ಸುನೀಲ್, ಸುಚೀಂದ್ರ, ಚಕ್ರಪಾಣಿ, ಈಶ್ವರ್ ಗೌಡ, ಯೋಗೀಶ್ ಹಾಗೂ ಇನ್ನಿತರರು ಹಾಜರಿದ್ದರು.