ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಪೂರ್ಣ ಶುಲ್ಕ ಪಾವತಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಯೊಬ್ಬನನ್ನು ಆನ್ ಲೈನ್ ಕ್ಲಾಸ್ ನಿಂದ ಹೊರಗಿಟ್ಟಿರುವ ಘಟನೆ ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೋಕಿನ ಕುರುಬರ ಹುಂಡಿ ಗ್ರಾಮದ ಮಹೇಶ್ ಎಂಬುವವರ ಪುತ್ರ ಯಶಸ್ ಆನ್ ಶಿಕ್ಷಣದಿಂದ ವಂಚಿತನಾದ ವಿದ್ಯಾರ್ಥಿ ಆಗಿದ್ದಾನೆ.
ಶೈಕ್ಷಣಿಕ ಶುಲ್ಕ ಪೂರ್ಣ ಪಾವತಿ ಮಾಡುವಂತೆ ಒತ್ತಡ ಹೇರಿ ಆನ್ ಲೈನ್ ಕ್ಲಾಸ್ ನಿಂದ ನನ್ನ ಮಗನನ್ನ ವಂಚಿಸಿದ್ದಾರೆಂದು ಪೆÇೀಷಕರೊಬ್ಬರು ಆರೋಪಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೋಕಿನ ಕುರುಬರ ಹುಂಡಿ ಗ್ರಾಮದ ಮಹೇಶ್ ಎಂಬುವವರ ಪುತ್ರ ಚಾಮರಾಜನಗರ ಜೆಎಸ್‍ಎಸ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಯಶಸ್ ಎಂಬ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದು ಪ್ರಾಂಶುಪಾಲರು ವಿದ್ಯಾರ್ಥಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಉಪನಿರ್ದೇಶಕರ ಕಛೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೂ ಮಹೇಶ್ ದೂರು ಸಲ್ಲಿಸಿದ್ದಾರೆ.
ನನ್ನ ಮಗ ಯಶಸ್ ನ ಅರ್ಧ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದು ಆರ್ ಟಿ ಇ ಕಾಯ್ದೆ 21 (ಎ) ಅನ್ನು ಪ್ರಾಂಶುಪಾಲರು ಉಲ್ಲಂಘಿಸಿದ್ದಾರೆಂದು ಅವರು ಜಿ ನ್ಯೂಸ್ 5 ಗೆ ತಿಳಿಸಿದ್ದಾರೆ.
ಅಷ್ಟೆ ಅಲ್ಲ ಪ್ರಶ್ನಿಸಲು ಹೋದರೆ ಏರು ದ್ವನಿಯಲ್ಲಿ ಮಾತಾಡಿ ದಬ್ವಾಳಿಕೆ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ವಾರ್ಷಿಕ ಶುಲ್ಕವನ್ನ ಎರಡು ಕಂತುಗಳಲ್ಲಿ ಪಾವತಿಸಿಕೊಳ್ಳುವಂತೆ ಹಾಗೂ ಪ್ರಾಂಶುಪಾಲ ಉಮೇಶ್ ಅವರು ಮಕ್ಕಳು, ಪೆÇೀಷಕರೊಂದಿಗೆ ಸಂಯಮದಿಂದ ವರ್ತಿಸುವಂತೆ ಸೂಕ್ತ ಮಾರ್ಗದರ್ಶನ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಒಟ್ಟಾರೆ ಜಿಲ್ಲಾ ಉಸ್ತುವಾರಿ ಸಚಿವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಕ್ಷೇತ್ರದಲ್ಲಿ ಇಂತಹ ಪ್ರಸಂಗ ನಡೆದಿರುವುದು ಶೋಚನೀಯ ಎಂದರೆ ತಪ್ಪಾಗಲಾರದು.