ಚಾಮರಾಜನಗರ: ಹೊಸದಾಗಿ ಮನೆ ಕಟ್ಟೊವಾಗ ಅವರವರ ಆಯಾಮಗಳಲ್ಲಿ, ವಾಸ್ತು ಪ್ರಕಾರ ಕಟ್ಟೋದು ಸಹಜ.
ಆದರೆ ಇಲ್ಲಿ ಡಿವೈಎಸ್ಪಿಯೊಬ್ಬರು ಸರ್ಕಾರಿ ಕಟ್ಟಡದ ಬಾಗಿಲುಗಳ ಮಾರ್ಗಗಳನ್ನೆ ಬದಲಾವಣೆ ಮಾಡಿ ವಾಸ್ತುಮಯಗೊಳಿಸಿದ್ದಾರೆ ಎನ್ನಲಾಗಿದೆ.
ಚಾಮರಾಜನಗರದ ಲೋಕೊಪಯೋಗಿ ಕಟ್ಟಡದಲ್ಲಿರೋ ಎ-14 ಕಟ್ಟಡ ಬಹಳ ವರ್ಷಗಳಿಂದಲೂ ಡಿವೈಸ್ಪಿ ಹುದ್ದೆ ಅಲಂಕರಿಸಿದವರ ವಾಸಕ್ಕೆ ನೀಡಲಾಗುತ್ತದೆ.
ಚಾಮರಾಜನಗರದಲ್ಲಿ ಬಹಳ ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದಾಗ ಎಸ್ಪಿ ಶ್ರೀಕಂಠಪ್ಪ ಅವರು ಲೋಕಾಯುಕ್ತ ಬಲೆಗೆ ಬಿದ್ದಾಗ ಅದಕ್ಕೆ ಗ್ರಹಚಾರ ಒಕ್ಕರಿಸಿತೋ ಏನೊ ನಂತರ ಬಂದರವರು ಒಂದಲ್ಲ ಒಂದು ತರ ಬದಲಾವಣೆ ಮಾಡಿಯೆ ನಿಲಯದೊಳಗೆ ಇರುತ್ತಿದ್ದರು.
ಕಳೆದ ಸಾಲಿನಲ್ಲೂ ಅಕ್ರಮ ಮರಳು ಸಾಗಾಣಿಕೆ ಸಂಬಂಧ ವಿವಾದಗಳನ್ನ ತಿರುಚಿದ ಮೇರೆಗೆ ಡಿವೈಎಸ್ಪಿ ಸೇರಿದಂತೆ ಹಲವರನ್ನ ಅಮಾನತುಗೊಳಿಸಲಾಗಿತ್ತು.
ಈ ಕಟ್ಟಡ ಲೋಕೊಪಯೋಗಿ ಇಲಾಖೆಯದ್ದಾದರೂ ಇಲ್ಲಿ ಬರೋ ಅಧಿಕಾರಿಗಳಿಗಂತು ಒಂದಲ್ಲ ಒಂದು ಕಂಟಕ ಮಾತ್ರ ತಪ್ಪಿದಲ್ಲ ಎಂಬಂತಾಗಿದ್ದರೂ ಈಗ ಹೊಸದಾಗಿ ಬಂದಂತವರು ಮನೆಯೊಂದು ಎರಡು ಬಾಗಿಲು ಇರುವುದನ್ನ ಮನೆಯೊಂದಕ್ಕೆ ಒಂದೆ ಬಾಗಿಲು ಎಂಬಂತೆ ಮಾಡಿದ್ದಾರೆ.
ಉತ್ತರ ದಿಕ್ಕಿನಲ್ಲಿದ್ದ ಒಂದು ಬಾಗಿಲು ಮುಚ್ಚಿ ದಕ್ಷಿಣ ದಿಕ್ಕಿನತ್ತ ಬಾಗಿಲು ಪ್ರವೇಶ ಮಾಡಿದ್ದಾರೆ.
ಒಟ್ಟಾರೆ ಇವರು ಕೂಡ ಕಟ್ಟಡದ ಪೂರ್ವಪರ ಹಿನ್ನಲೆ ಅರಿತೊ ಏನೊ ವಾಸ್ತು ಬದಲಾಯಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ.