ವಿದ್ಯುತ್ ತಂತಿ ತುಳಿದು 3 ಹಸುಗಳು ಸಾವು

ಮೈಸೂರು: ವಿದ್ಯುತ್ ತಂತಿ ತುಳಿದು ಹಸುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ವರಕೋಡು ಗ್ರಾಮದಲ್ಲಿ ನಡೆದಿದೆ.
ವರಕೋಡು ಗ್ರಾಮದ ಮಹದೇವು ಎಂಬುವರಿಗೆ ಸೇರಿದ ಮೂರು ಹಸುಗಳು ವಿದ್ಯುತ್ ತಂತಿ ತುಳಿದು ಮೃತಪಟ್ಟಿವೆ.
ಗ್ರಾಮದ ಶ್ರೀಧರ್ ಎಂಬುವರ ಹೊಲದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೂರು ಹಸುಗಳು ಒದ್ದಾಡುತ್ತಿದ್ದುದ್ದನ್ನು ಕಂಡು ಹಸು ಮೇಯಿಸಲು ಹೋಗಿದ್ದ ಯುವಕ ಹಸುವಿನ ರಕ್ಷಣೆ ಮಾಡಲು ಪ್ರಯತ್ನಿಸಿದ್ದಾನೆ. ಆದರೆ ಆತನಿಗೂ ಕರೆಂಟ್ ಶಾಕ್ ಹೊಡೆದ ಕಾರಣ ಹಸುಗಳನ್ನು ರಕ್ಷಿಸಲು ಸಾಧ್ಯವಾಗದೆ ಹಸುಗಳು ಸಾವನ್ನಪ್ಪಿವೆ.
ಹೆಚ್ ಎಫ್ ತಳಿಯ ಒಂದು ಸೀಮೆ ಹಸು, ಒಂದು ಜೆರ್ಸಿ ಕರು ಹಾಗೂ ಒಂದು ನಾಟಿ ಹಸು ಬಲಿಯಾಗಿವೆ.
ಸ್ಥಳಕ್ಕೆ ವರುಣಾ ಠಾಣೆಯ ಪೆÇಲೀಸರು, ಚೆಸ್ಕಾಂ ಜೆಇ ಶಿವಕುಮಾರ್, ಪಶುವೈದ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ.