ಖಜಾನೆ ನೌಕರರ ಸಂಘದ ಮೈಸೂರು ಶಾಖೆ ಉದ್ಘಾಟನೆ

ಮೈಸೂರು: ಖಜಾನೆ ನೌಕರರ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಖಜಾನೆ ನೌಕರರ ಸಂಘದ ಮೈಸೂರು ಶಾಖೆ ಸಂಘಟನೆಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಖಜಾನೆ ಜಂಟಿ ನಿರ್ದೇಶಕಿ ಯಶೋಧರವರು ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರ ಖಜಾನೆ ನೌಕರರ ಸಂಘದ ಮೈಸೂರು ಶಾಖೆಯನ್ನು ನಗರದ ವಾರ್ತಾ ಭವನದಲ್ಲಿ ಗುರುವಾರ ಅವರು ಉದ್ಘಾಟನೆ ಮಾಡಿ ಮಾತನಾಡಿದರು.
ನೌಕರರ ಸಮಸ್ಯೆಗಳು ಯಾವುದೇ ರೀತಿ ಇರಬಹುದು. ಈ ಸಮಸ್ಯೆಯನ್ನು ಬಗೆಹರಿಸುವಂತ ಕೆಲಸ ಮಾಡಬೇಕು. ನೌಕರರ ಕ್ಷೇಮಾಭಿವೃದ್ಧಿ ಆಗಬೇಕು. ಖಜಾನೆ ನೌಕರರ ಆರೋಗ್ಯ ಕಾಪಾಡುವ ಜತೆಗೆ ಅವರ ಸಮಸ್ಯೆಗಳನ್ನು ಪರಿಹರಿಸಲು ಈ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಎನ್ ಕೆ ಗಣೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮೈಸೂರು ಜಿಲ್ಲಾ ಖಜಾನೆ ನೌಕರರ ಸಂಘ ಅಧ್ಯಕ್ಷ ಹೇಮಂತ್ ಕುಮಾರ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಗಿರಿಜಮ್ಮ, ಕಾರ್ಯದರ್ಶಿ ಎಚ್ ಎಂ ಗಣೇಶ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.