ಗೂಬೆ ಮಾರಾಟ: ಮೂವರ ಬಂಧನ

ಮೈಸೂರು, ನ. 21- ಅಪರೂಪದ ಕಂದು ಮೀನು ಗೂಬೆ (ಬ್ರೌನ್ ಫಿಶ್ ಔಲ್)ಯನ್ನು ಮಾರಾಟ ಮಾಡಲು ಯತ್ನಿಸಿದ ಮೂರು ಮಂದಿಯನ್ನು ಅರಣ್ಯ ಸಂಚಾರ ದಳದ ಸಿಬ್ಬಂದಿ ಬಂಧಿಸಿದ್ದಾರೆ.
ಮಂಡ್ಯ ವಾಸಿಗಳಾದ ಕುಮಾರ್, ಮಹಮ್ಮದ್ ರಫಿ, ಮದ್ದೂರಿನ ನಿವಾಸಿ ರಾಜೇಶ್ ಬಂಧಿತರು.
ಶ್ರೀರಂಗಪಟ್ಟಣದ ಸಮೀಪ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಗೂಬೆ ಮಾರಾಟ ಮಾಡಲು ಯತ್ನಿಸುತ್ತಿರುವ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಈ ಮೂವರನ್ನು ಬಂಧಿಸಿದ್ದಾರೆ.
ಬಂಧಿತರ ಬಳಿ ಇದ್ದ ಅಪರೂಪದ ಕಂದು ಮೀನು ಗೂಬೆ ಹಾಗೂ ಅವರು ಕೃತ್ಯಕ್ಕೆ ಬಳಸಿದ್ದ ಸ್ಕೂಟರ್‍ವೊಂದನ್ನು ವಶಪಡಿಸಿಕೊಂಡಿದ್ದಾರೆ.
ಅರಣ್ಯ ಅಪರಾಧ ತಡೆ ಕಾಯ್ದೆಯಡಿ ಗೂಬೆಯನ್ನು ಸಾಕುವುದು, ಮಾರಾಟ ಮಾಡುವುದು ಅಪರಾಧವಾಗಿದ್ದು ಈ ಮೂವರು ಹಣಕ್ಕಾಗಿ ಗೂಬೆಯನ್ನು ಮಾರುತ್ತಿದ್ದರು ಎಂಬುದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದು ಬಂದಿದೆ.
ಅರಣ್ಯ ಸಂಚಾರಿ ದಳದ ಡಿಸಿಎಫ್ ಎ.ಟಿ.ಪೂವಯ್ಯ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು ಆರ್ ಎಫ್ ಒ ವಿವೇಕ್, ಡಿಆರ್ ಎಫ್ ಒ ಗಳಾದ ಮೋಹನ್, ಸುಂದರ್, ಪ್ರಮೋದ್, ನಾಗರಾಜು, ಸಿಬ್ಬಂದಿ ರವಿ ಕುಮಾರ್, ರವಿನಂದನ್, ಗೋವಿಂದ, ಚಾಲಕರಾದ ಪುಟ್ಟಸ್ವಾಮಿ, ಮಧು ಪಾಲ್ಗೊಂಡಿದ್ದರು.