ಮೈಸೂರು: ಮೈಸೂರು ರಿಂಗ್ ರಸ್ತೆ ಇಕ್ಕೆಲಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್ ಎಚ್ಚರಿಕೆ ನೀಡಿದರು.
ಮುಡಾ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಒಟ್ಟು 30 ವಿವಿಧ ಸ್ಥಳಗಳಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ. ಅದರಲ್ಲಿ 13 ಸ್ಥಳಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ತ್ಯಾಜ್ಯ ಸಮಸ್ಯೆಗಳಿಂದ ಮೈಸೂರು ಸೌಂದರ್ಯ ಹಾಳಾಗುತ್ತಿದೆ. ಈ ಹಿನ್ನಲೆಯಲ್ಲಿ ಕಟ್ಟಡ ತ್ಯಾಜ್ಯ, ಡೇಬ್ರಿಸ್ ಹಾಗೂ ಇತ್ಯಾದಿಗಳನ್ನು ತೆರವುಗೊಳಿಸಲು ಕಾರ್ಯಕ್ರಮ ರೂಪಿಸಿದ್ದೇವೆ ಎಂದವರು ತಿಳಿಸಿದರು.
ಸಾರ್ವಜನಿಕರೂ ಕೂಡ ಮೂಡಾ ಜೊತೆ ಕೈಜೋಡಿಸಿ. ತ್ಯಾಜ್ಯ ವಿಲೇವಾರಿ ಮಾಡುವುದು ಕಂಡುಬಂದಲ್ಲಿ ಛಾಯಾ ಚಿತ್ರ ತೆಗೆದು 8884000750 ಸಂಖ್ಯೆಗೆ ಕಳುಹಿಸಿ. ಅಂತವರ ವಿರುದ್ಧ ಕಾನೂನು ಕೈಗೊಳ್ಳಲಾಗುತ್ತದೆ. ಅವರ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ರಾಜೀವ್ ಹೇಳಿದರು.