ಹಬ್ಬದ ವಿಶೇಷ ರೈಲುಗಳ ಸಂಚಾರದ ಅವಧಿ ವಿಸ್ತರಣೆ

ಮೈಸೂರು, ನ. 26- ದಸರಾ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ಮೈಸೂರಿನಿಂದ ವಿವಿಧ ಪ್ರದೇಶಗಳಿಗೆ ಹಬ್ಬದ ವಿಶೇಷ ಎಕ್ಸ್‍ಪ್ರೆಸ್ ರೈಲು ಸೇವೆಯನ್ನು ಆರಂಭಿಸಲಾಗಿತ್ತು.
ಇದೀಗ ನೈಋತ್ಯ ರೈಲ್ವೆ ಈ ರೈಲುಗಳ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಿದೆ.
ಕೆಲವು ರೈಲುಗಳು ಡಿಸೆಂಬರ್ ತನಕ, ಮತ್ತೆ ಕೆಲವು ರೈಲುಗಳು 2021ರ ಜನವರಿ ತನಕ ಸಂಚಾರ ನಡೆಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಮೈಸೂರು ನಗರದಿಂದ ಸಂಚರಿಸುವ ಒಟ್ಟು 8 ರೈಲುಗಳ ಸಂಚಾರದ ಅವಧಿ ವಿಸ್ತರಣೆ ಮಾಡಲಾಗಿದೆ.
ಇವುಗಳಲ್ಲಿ ಪ್ರತಿದಿನ ಸಂಚರಿಸುವ, ವಾರಕ್ಕೆ ಎರಡು ಬಾರಿ ಸಂಚರಿಸುವ ರೈಲುಗಳು ಸೇರಿವೆ.
ಮೈಸೂರು-ವಾರಣಾಸಿ, ಮೈಸೂರು-ಅಜ್ಮೀರ್, ಅಜ್ಮೀರ್-ಮೈಸೂರು, ವಾರಣಾಸಿ-ಮೈಸೂರು ಸೇರಿದಂತೆ ವಿವಿಧ ರೈಲುಗಳ ಸೇವೆ ವಿಸ್ತರಣೆ ಮಾಡಲಾಗಿದೆ.