ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ವರ್ಷಕ್ಕೂಮ್ಮೆ ಆಡಳಿತ ತರಬೇತಿ ಸಂಸ್ಥೆಯವರು ಎಲ್ಲಾ ಇಲಾಖೆಗಳನ್ನೊಳಗೊಂಡಂತೆ ಮಾಹಿತಿ ಹಕ್ಕು ಕಾರ್ಯಗಾರ ನಡೆಸೋದು ಸಹಜ.
ಆದರೆ ಇಲ್ಲಿ ತರಬೇತಿ ಪಡೆದವರು ಆವಾಗ ಟೀ ಬಿಸ್ಕತ್ ತಿನ್ನೋಕ್ ಬರ್ತಾರಾ ಅನ್ನೋದು ಈಗ ಅನುಮಾನ ಪ್ರಾರಂಭವಾಗಿ ಬಿಟ್ಟಿದೆ.
ಚಾಮರಾಜನಗರ ಪೂರ್ವ ಠಾಣೆಗೆ ಅರ್ಜಿಯೊಂದನ್ನ ಮಾ.ಹ. ಕಾರ್ಯಕರ್ತರೊಬ್ವರು 27-10-2020 ರಂದು ಸಲ್ಲಿಸಿದರೆ ಆ ಠಾಣೆಯಿಂದ 22-11-2020ಕ್ಕೆ ಹಿಂಬರಹ ನೀಡುತ್ತಾರೆ.
ವಿಪರ್ಯಾಸವೆಂದರೆ ಹಣ ಪಡೆಯಲು ಸೂಚಿಸುವ ಹಿಂಬರಹ 5 ದಿನದೊಳಗೆ ಕೊಡಬೇಕೆಂಬ ನಿಯಮವೇ ತಿಳಿಯದಿರುವುದು ದುರಂತವೇ ಸರಿ.
ಹಣ ಪಾವತಿಸುವ ಹಿಂಬರಹವನ್ನ ತಿಂಗಳು ಕಳೆದು ಮೇಲ್ಮನವಿ ಹೋಗಬೇಕೆಂದು ನಿಶ್ಚಯಿಸಿರುವಾಗ ಇನ್ನೇನು 5 ದಿನ ಬಾಕಿ ಇದೆ ಎನ್ನುವಾಗ ಕಣ್ಣೊರೆಸುವ ತಂತ್ರಕ್ಕೆ ಇಳಿದಿದ್ದಾರೆ.
ಇಲ್ಲಿ ಪೂರ್ವ ಠಾಣೆಯವರದ್ದು ಒಂದು ಕಥೆಯಾದರೆ ಮತ್ತೊಂದು ವಿಭಾಗದ್ದು ಅದೇ ಕಥೆ.
ಪುಟಗಟ್ಟಲೆ ಹಣ ಕಟ್ಟಿ ಅಂದ್ರೆ ಮಾಹಿತಿ ಪಡೆಯೊಲ್ಲ ಎಂಬ ಆಶಾಭಾವನೆಯಲ್ಲಿ ಸಾ.ಮಾಹಿತಿ ಅಧಿಕಾರಿಗಳು ವ್ಯಾಪಕ ಲೋಪದೋಷಗಳನ್ನ ಮಾಡಿರುವುದು ದಾರಿ ತಪ್ಪಿಸುವ ಹಂತಕ್ಕೆ ಇಂತಹ ಹಿಂಬರಹ ನೀಡುತ್ತಿರುವುದು ಶೋಚನೀಯ.
ಒಟ್ಟಾರೆ ಚೆಕ್ ಪೆÇಸ್ಟ್ ಅಲ್ಲಿ ನಿಯೋಜನೆ ಮಾಡಲಾಗದವರನ್ನ ನಿಯೋಜಿಸಿ ವ್ಯಾಪಕ ಅವ್ಯವಹಾರ ನಡೆಸಿದ್ದಾರೆಂದು ಮಾಹಿತಿ ಕೇಳಿಬರುತ್ತಿದ್ದು ಇಲಾಖಾವಾರು ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸೋ ಜೊತೆಗೆ ಇಲಾಖೆ ಅಧೀಕ್ಷಕರು ಕೆಳ ಹಂತದ ಸಿಬ್ಬಂದಿಗಳಿಗೆ ತರಬೇತಿ ನೀಡೋದರ ಜೊತೆಗೆ ಎಚ್ಚರಿಕೆಯ ತಾಕೀತು ಮಾಡಬೇಕಾಗಿದೆ. ಇಲ್ಲವಾದರೆ ಶಿಸ್ತಿನ ಇಲಾಖೆ ಅಶಿಸ್ತಿನಲ್ಲೆ ಕುಣಿಯಬೇಕಾಗುತ್ತದೆ.