ಮೈಸೂರು, ನ. 28- ಬ್ಯಾಂಕ್ ಬಳಿ ನಿಲ್ಲಿಸಲಾಗಿದ್ದ ಕಾರಿನಲ್ಲಿದ್ದ ಹಣನ್ನು ದೋಚಿರುವ ಘಟನೆ ನಗರದಲ್ಲಿ ನಡೆದಿದೆ.
ವಿವಿಪುರಂನ ಹೆಚ್.ಡಿ.ಎಫ್.ಸಿ ಬ್ಯಾಂಕ್ ಬಳಿ ನಿಲ್ಲಿಸಿದ್ದ ಕಾರಿನ ಗಾಜನ್ನು ಕಳ್ಳರು ಒಡೆದು ಕಾರಿನಲ್ಲಿದ್ದ 10 ಲಕ್ಷ ರೂ. ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಪಿರಿಯಾಪಟ್ಟಣದ ಆಭರಣ ಅಂಗಡಿವೊಂದರ ಮಾಲೀಕ ಮನೋಜ್ ಕುಮಾರ್ ಹಣ ಕಳೆದುಕೊಂಡವರಾಗಿದ್ದಾರೆ.
ಮನೋಜ್ ಕುಮಾರ್ ಪಿರಿಯಾಪಟ್ಟಣದಿಂದ ತಮ್ಮ ಅಣ್ಣನಿಗೆ ಹಣ ನೀಡಲೆಂದು ಕಾರಿನಲ್ಲಿ ಮೈಸೂರಿಗೆ ಬಂದಿದ್ದಾರೆ.
ಬ್ಯಾಂಕಿನ ಮುಂಭಾಗ ಕಾರು ನಿಲ್ಲಿಸಿ ತಮ್ಮ ಖಾತೆಯ ಸ್ಟೇಟ್ ಮೆಂಟ್ ಪಡೆಯಲು ಹೋಗಿದ್ದಾರೆ. ನಂತರ ಬಂದು ನೋಡಿದಾಗ ಕಾರಿನ ಕಿಟಕಿ ಗಾಜನ್ನು ಒಡೆದು ಹಣ ಕಳುವು ಮಾಡಿರುವುದು ಗೊತ್ತಾಗಿದೆ
ಈ ಬಗ್ಗೆ ವಿವಿಪುರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.