ಯಾರು ಪೇಮೆಂಟ್ ಕೊಡುತ್ತಾರೋ ಹೆಚ್.ವಿಶ್ವನಾಥ್ ಅಲ್ಲಿರುತ್ತಾರೆ -ಶಾಸಕ ಸಾ.ರಾ.ಮಹೇಶ್

ಮೈಸೂರು: ಯಾರು ಪೇಮೆಂಟ್ ಕೊಡುತ್ತಾರೋ ಅಲ್ಲಿ ಇರುತ್ತಾರೆ ಹೆಚ್.ವಿಶ್ವನಾಥ್ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ನಗರದಲ್ಲಿ ಶನಿವಾರ ಸಾ.ರಾ. ಮಹೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಹೆಚ್.ಡಿ.ಕುಮಾರಸ್ವಾಮಿ ಅವರು ಸಖನನ್ನು ಹುಡುಕಿಕೊಂಡು ಹೋಗುತ್ತಾರೆಂದು ಟೀಕಿಸಿದ್ದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗೆ ಸಾ.ರಾ.ಮಹೇಶ್ ಟಾಂಗ್ ನೀಡಿ, ಕಾಂಗ್ರೆಸ್ ನಲ್ಲಿದ್ದಾಗ ಪಕ್ಷವೇ ನಮ್ಮ ತಂದೆ-ತಾಯಿ ಅಂತಿದ್ದರು. 30 ವರ್ಷಕ್ಕೆ ಡೈವೋರ್ಸ್ ಕೊಟ್ಟು ಬಂದರು. ಕೆಲವರು ಬೇಡ ಅಂದರೂ ನಾವು ಕರೆದುಕೊಂಡು ಬಂದೆವು. ಒಂದು ವರ್ಷಕ್ಕೆ ಡೈವೋರ್ಸ್ ಕೊಟ್ಟರು. ಈಗ ಯಾರು ಪೇಮೆಂಟ್ ಕೊಡ್ತಾರೆ ಅಲ್ಲಿ ಇರುತ್ತಾರೆ. ಅಲ್ಲಿಗೆ ಸಖ ಯಾರು ಅನ್ನುವುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು ಎಂದು ಸಾ.ರಾ.ಮಹೇಶ್ ಮಾರ್ಮಿಕವಾಗಿ ನುಡಿದರು.
ನಿತ್ಯವೂ ಮಾಸ್ಕ್ ತಪಾಸಣೆ ಹೆಸರಲಿ ಸುಲಿಗೆ ನಡೆಯುತ್ತಿದೆ ಎಂದ ಅವರು ಸರ್ಕಾರ ಅಧಿಕಾರಿಗಳನ್ನು ಬಿಟ್ಟು ರೋಲ್‍ಕಾಲ್ ಮಾಡಿಸುತ್ತಿದೆ ಎಂದು ಸಾ. ರಾ. ಮಹೇಶ್ ಆರೋಪಿಸಿದರು.
ನಿತ್ಯವೂ ಮಾಸ್ಕ್ ತಪಾಸಣೆ ಹೆಸರಲಿ ಸುಲಿಗೆ ನಡೆಯುತ್ತಿದೆ. ಗೃಹ ಸಚಿವರು ಐಜಿಪಿಗೆ ಇದನ್ನು ನಿಲ್ಲಿಸಲು ಸೂಚಿಸಬೇಕು ಎಂದರು.
ಇದು ಒಂದು ರೀತಿ ಲೆಸೈನ್ಸ್ ಇಟ್ಟುಕೊಂಡು ರೋಲ್‍ಕಾಲ್ ಮಾಡುವ ರೀತಿಯಾಗಿದೆ. ಕೂಲಿ ಕೆಲಸ ಮಾಡುವವರಿಗೆ 500 ರೂ. ದಂಡ ವಿಧಿಸಿದರೆ ಹೇಗೆ? ಅವರು ಪ್ರತಿ ದಿನ ದುಡಿದ ದುಡ್ಡು ನಿಮಗೆ ದಂಡ ಕಟ್ಟಿ ಹೋಗಬೇಕಾ ? ಎಂದು ಅವರು ಪ್ರಶ್ನಿಸಿದರು.