ಗೋಹತ್ಯೆ ನಿಷೇಧ: ಸಚಿವ ಎಸ್ ಟಿಎಸ್ ಗೆ ಮನವಿ

ಮೈಸೂರು, ಡಿ. 2- ಶ್ರೀರಾಮಚಂದ್ರಾಪುರ ಮಠದ ಭಾರತೀಯ ಗೋಪರಿವಾರ ಸಂಘಟನೆಯು ರಾಜ್ಯಾದ್ಯಂತ ಗೋಹತ್ಯೆ ನಿಷೇಧದ ಹಕ್ಕೊತ್ತಾಯದ ಮಹಾ ಅಭಿಯಾನವಾದ ಅಭಯಾಕ್ಷರವನ್ನು ಹಮ್ಮಿಕೊಂಡಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಭೇಟಿಯಾಗಿ ಮುಂಬರುವ ಇದೇ ವಿಧಾನಸಭಾ ಅಧಿವೇಶನದಲ್ಲಿ ಗೋಹತ್ಯೆ ನಿಷೇಧದವನ್ನು ಜಾರಿಗೊಳಿಸುವ ಮಸೂದೆಗೆ ಧ್ವನಿಯಾಗುವಂತೆ ಮನವಿ ಮಾಡಿಕೊಳ್ಳಲಾಯಿತು. ಶ್ರೀರಾಮಚಂದ್ರಾಪುರ ಮಠದ ಗೋರಕ್ಷಣ ಕೈಂಕರ್ಯಗಳು ಮತ್ತು ಭಾರತೀಯ ಗೋಪರಿವಾರದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, ವೈಯಕ್ತಿಕವಾಗಿ ಗೋಹತ್ಯೆಯನ್ನು ನಿಷೇಧಿಸುವಂತೆ ಆಗ್ರಹಿಸುವ ಅಭಯಾಕ್ಷರ ಅಭಿಯಾನದ ಬಗ್ಗೆಯೂ ಗಮನ ಸೆಳೆಯಲಾಯಿತು.
ಮೈಸೂರು ಜಿಲ್ಲೆಯಿಂದ 1,30,000 ಜನರು ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ನೀಡಿದ್ದ ವೈಯಕ್ತಿಕ ಹಕ್ಕೊತ್ತಾಯ ಪತ್ರಗಳನ್ನು ಸಹ ಸರ್ಕಾರಗಳಿಗೆ ಕಳುಹಿಸಿಕೊಡಲಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿಯೂ ರಾಜಕೀಯ ನಾಯಕರಿಗೆ ಗೋಹತ್ಯೆ ನಿಷೇಧಿಸಲು ಒತ್ತಾಯಿಸಲಾಗುತ್ತಿದ್ದು, ರಾಜ್ಯದ ಎಲ್ಲಾ ಸಚಿವರನ್ನು ಭೇಟಿಯಾಗಿ ಅಭಯಾಕ್ಷರದ ಬಗ್ಗೆ ಮಾಹಿತಿ ನೀಡಿ, ಗೋಹತ್ಯೆ ನಿಷೇಧಿಸುವಂತೆ ಆಗ್ರಹಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಭಾರತೀಯ ಗೋಪರಿವಾರದ ರಾಜ್ಯ ಸಂಯೋಜಕ ಆರ್.ಕೆ ಭಟ್ ಬೆಳ್ಳಾರೆ, ಜಿಲ್ಲಾ ಸಂಯೋಜಕ ರಾಕೇಶ್ ಭಟ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮಧು ಗೋಮತಿ, ಸುರೇಶ್ ಮಾಬಲಡ್ಕ, ಸತೀಶ್, ಸಂದೇಶ್ ಪವಾರ್, ಉಮಾಶಂಕರ್, ಟಿ.ಎಸ್. ಅರುಣ್, ಮಾಲಿನಿ ಪಾಲಾಕ್ಷ, ಹರಿಣಿ, ಶ್ರೀರಾಮಚಂದ್ರಾಪುರ ಮಠದ ಮೈಸೂರು ವಲಯದ ಅಧ್ಯಕ್ಷ ಮೋಹನ್ ಮಂಕಳಲೆ, ಕಾರ್ಯದರ್ಶಿ ಚಣಿಲ ಸುಬ್ರಹ್ಮಣ್ಯ ಭಟ್ , ಸಂಘಟನಾ ಕಾರ್ಯದರ್ಶಿ ಶಂಕರನಾರಾಯಣ ಉಪಸ್ಥಿತರಿದ್ದರು.