ಮೈಸೂರು, ಡಿ. 3- ನಗರದಲ್ಲಿ ಪೊಲೀಸರು ಅಪರಾಧ ತಡೆ ಮಾಸಾಚರಣೆ ನಡೆಸುತ್ತಿರುವ ಸಂದರ್ಭದಲ್ಲೇ ಸರಗಳ್ಳತನ ನಡೆದಿದೆ.
ವೃದ್ಧ ಮಹಿಳೆಯೊಬ್ಬರು ಧರಿಸಿದ್ದ ಚಿನ್ನದ ಸರವನ್ನು ಸರಗಳ್ಳರು ಅಪಹರಿಸಿಕೊಂಡು ಹೋಗಿರುವ ಘಟನೆ ನಗರದ ಎನ್ ಆರ್ ಮೊಹಲ್ಲಾದ ನಾರ್ಥ ಈಸ್ಟ್ ನಲ್ಲಿ ನಡೆದಿದೆ.
ಸುಧಾ (60) ಎಂಬವರೇ ಚಿನ್ನದಸರ ಕಳೆದುಕೊಂಡವರಾಗಿದ್ದಾರೆ.
ಸುಧಾರವರು ತಮ್ಮ ಮನೆಯ ಸಮೀಪ ನಡೆದುಕೊಂಡು ಹೋಗುತ್ತಿದ್ದ ವೇಳೆ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರ ಪೈಕಿ ಒಬ್ಬ ಈಕೆ ಧರಿಸಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಇನ್ಸ್‍ಪೆಕ್ಟರ್ ಅಜರುದ್ದೀನ್ ಮತ್ತು ಸಿಬ್ಬಂದಿ ಸರಗಳ್ಳರ ಪತ್ತೆಗೆ ಮುಂದಾಗಿದ್ದಾರೆ.
ಎನ್ ಆರ್ ಪೆÇಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.