ಜನ ಸಂಪರ್ಕಕ್ಕೆ ಸಿಗದ ಐಜಿಪಿ ಸಾಹೇಬ್ರು..!

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಹೆಸರಾದ ದಕ್ಷಿಣ ಪೆÇಲೀಸ್ ಮಹಾ ನಿರ್ದೇಶಕ ವಿಫುಲ್ ಕುಮಾರ್ ಅವರು ಜನರ ಸಂಪರ್ಕಕ್ಕೆ ಸಿಗದೇ ಹೋದದ್ದು ಕೆಲವು ಸಾರ್ವಜನಿಕರಿಗೆ ನಿರಾಸೆಯಾಯಿತು.
ಚಾಮರಾಜನಗರದಲ್ಲಿ ಕೊವೆಡ್-19 ಜನಾಂದೋಲನ ಕಾರ್ಯಕ್ರಮದ ಅಂಗವಾಗಿ ಬೈಕ್ ರ್ಯಾಲಿ ಚಾಲನೆ ಮಾಡಲು ಬಂದಿದ್ದರು.
ಕೆಲವರು ಅವರನ್ನ ನೋಡಲು ಬಂದಿದ್ದವರಿಗೂ ಅವರ ಭೇಟಿ ಅಸಾಧ್ಯವಾಗಿ ನಿರಾಸೆಯಾಯಿತು.
ಚಾಮರಾಜನಗರ ಯಳಂದೂರಿನ ಠಾಣಾ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ ಮಾಡಿದ ಇಲಾಖಾ ಅಧಿಕಾರಿಗಳು ಮುಖ್ಯ ಕೇಂದ್ರ ಚಾಮರಾಜನಗರದಲ್ಲಿ ಯಾಕೆ ನಡೆಸಲಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಆಯಾ ವಲಯದ ಎಸ್ಪಿಗಳು ಸಾರ್ವಜನಿಕರಿಗೆ ವೇದಿಕೆ ರೂಪಿಸಿ ಅಹವಾಲು ಸಲ್ಲಿಸಲು ವೇದಿಕೆ ಸಿದ್ದಪಡಿಸಿಕೊಟ್ಟರೆ ಅನುಕೂಲವಾಗಲಿದೆ.
ಇನ್ನು ಮುಂದಾದರೂ ಇಂತಹ ವೇದಿಕೆ ಹೆಚ್ಚು ಹೆಚ್ಚು ಕಲ್ಪಿಸಿಕೊಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೆಲವರು ಕೇಳಬಹುದು…ಆಯಾ ಠಾಣಾ ವಲಯದ ಇನ್ಸ್ ಪೆಕ್ಟರ್ ಹಾಗೂ ಡಿವೈಸ್ಪಿ,ಎಸ್ಪಿ ಗಳು ಇದ್ದರೂ ಕೆಲವೊಮ್ಮೆ ಕೆಲಸವಾಗದ್ದು ಐಜಿಪಿ ಅವರಿಂದ ಆಗಬಹುದೇನೊ ಎಂಬ ಆಶಾಭಾವನೆ ಇಟ್ಟಕೊಂಡು ಬರೋದು ಎಂಬ ಅರಿವು ಇದ್ದರೆ ಸೂಕ್ತ.