ಕುರುಬ ಎಸ್.ಟಿ.ಹೋರಾಟಕ್ಕೆ ಸಿದ್ದರಾಮಯ್ಯನವರೇ ಮುಂದೆ ನಿಂತುಕೊಳ್ಳಲಿ -ಹೆಚ್ ವಿಶ್ವನಾಥ್

ಮೈಸೂರು: ಕುರುಬ ಎಸ್.ಟಿ. ಹೋರಾಟಕ್ಕೆ ಸಿದ್ದರಾಮಯ್ಯನವರೇ ಮುಂದೆ ನಿಂತುಕೊಳ್ಳಲಿ; ನಾವೆಲ್ಲ ಹಿಂದೆ ಹೋಗುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಹೋರಾಟಕ್ಕೆ ನಾವು ಬರುತ್ತೇವೆ ಎನ್ನುವ ಮೂಲಕ ಸಿದ್ದರಾಮಯ್ಯನವರಿಗೆ ಹೋರಾಟಕ್ಕೆ ವಿಶ್ನಾಥ್ ಆಹ್ವಾನ ನೀಡಿದರು.
ಸಿದ್ದರಾಮಯ್ಯ ಹೋರಾಟಕ್ಕೆ ಕರೆದಿಲ್ಲ, ಆರ್ ಎಸ್ ಎಸ್ ಸಂಚು ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಲು ನಮ್ಮ ಸಮುದಾಯ ತನು ಮನ ದನ ಎಲ್ಲವನ್ನೂ ಕೊಟ್ಟಿದೆ. ಅಂತ ಸಮುದಾಯಕ್ಕೆ ಹೋರಾಟ ಯಾಕೇ ಅಂತೀರಲ್ಲ. ನೀವು ಮಾರ್ಗದರ್ಶನ ಮಾಡಿದರೆ ಈ ಹೋರಾಟ ಇನ್ನೂ ಎತ್ತರಕ್ಕೆ ಬೆಳೆಯುತ್ತಿತ್ತು ಎಂದರು.
ನಾವೆಲ್ಲ ಸೇರಿ ಈ ಕೆಲಸ ಮಾಡಬೇಕಿದೆ. ಈಗಲಾದರೂ ಹೋರಾಟಕ್ಕೆ ಬನ್ನಿ. ನಿಮ್ಮ ಸಹಕಾರ ಸಮುದಾಯಕ್ಕೆ, ಸಮಾಜಕ್ಕೆ, ರಾಜ್ಯಕ್ಕೆ ಬೇಕಾಗಿದೆ. ನಮ್ಮ ಜೊತೆ ಸೇರಿಕೊಳ್ಳಿ ಎಂದು ವಿಶ್ವನಾಥ್ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದರು.
ಇದು ರಾಜಕೀಯ ಹೋರಾಟ ಅಲ್ಲ. ನಾವೇನು ಸಿದ್ದರಾಮಯ್ಯನವರಿಗೆ ಮತ್ತೆ ಸಿಎಂ ಮಾಡೋಕೆ ಜೈ ಅನ್ನಲ್ಲ. ಸಮಯದಾಯದ ಅಭಿವೃದ್ಧಿಗೆ ಕರೆಯುತ್ತಿದ್ದೇವೆ. ನಾನು ನಾಯಕತ್ವ ತ್ಯಾಗ ಮಾಡಿದ್ದಕ್ಕೇನೆ ಅವರು ಸಿಎಂ ಆಗಿದ್ದು ಎಂದರು.
ಮೀಸಲಾತಿ ವಿಚಾರದಲ್ಲಿ ಹೋರಾಟದ ಅವಶ್ಯಕತೆ ಇದೆ. ಆದರೆ ನೀವೂ ಹೋರಾಟಕ್ಕೆ ಬರಲ್ಲ ಎಂದಿದ್ದೀರಿ. ಎಸ್.ಟಿ.ನ ಯಾರೋ ಹೈಜಾಕ್ ಮಾಡ್ತಿದ್ದಾರೆ ಅಂತೀರಿ. ದೊಡ್ಡ ಸಮುದಾಯವನ್ನು ಯಾರೂ ಹೈಜಾಕ್ ಮಾಡಲು ಆಗಲ್ಲ ಎಂದರು.
ಸಿದ್ದರಾಮಯ್ಯನವರೇ ಏಕವಚನದಲ್ಲಿ ಮಾತನಾಡೋದು ಬಿಡಿ. ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸಬೇಡಿ. ನಾನು ನಿಮಗಿಂತ ರಾಜಕೀಯದಲ್ಲಿ ಹಿರಿಯ. ನನ್ನ ಸಲಹೆ ಸ್ವೀಕರಿಸಿ. ಮುಂದಾದರೂ ಎಲ್ಲರನ್ನು ಬಹುವಚನದಲ್ಲಿ ಮಾತನಾಡಿಸಿ. ದೇವರಾಜ್ ಅರಸ್ ಅವರಂತೆ ಎಲ್ಲರನ್ನು ಗೌರವಿಸೋದು ಕಲಿಯಿರಿ ಎಂದು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು.
ಯೋಗೇಶ್ವರ್ ಹಾಗೂ ಸಂತೋಷ್ ತೆಗೆದುಕೊಂಡು ಹೋದರು ಅಂತ ಹೇಳಿದ್ದೇನೆ. ನೀವು ಜಿ.ಟಿ.ದೇವೇಗೌಡರಿಗೆ ಹಣ ಕೊಟ್ಟಿದ್ದೇವೆ ಅಂದ್ರಲ್ಲ ಅದು ಯಾವ ಹಣ. ಅದು ಬ್ಲಾಕ್ ಮನಿಯೋ ವೈಟ್ ಮನಿಯೋ? ಎಷ್ಟು ಕೋಟಿ ಅಂತ ನೀವು ಬಹಿರಂಗ ಪಡಿಸಿ ಎಂದರು.