ಮೈಸೂರು: ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸೋಮವಾರ (ಡಿ. 7) ದಿಂದ ಆರಂಭವಾಗಲಿದೆ.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ, ಸರಗೂರು ತಾಲೂಕುಗಳ 148 ಗ್ರಾಮಪಂಚಾಯತ್ ಗಳ 949 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ನಾಮಪತ್ರ ಸಲ್ಲಿಕೆಗೆ ಡಿ. 11 ಕೊನೆಯ ದಿನ. ಡಿ. 12ರಂದು ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಡಿ. 14 ಕೊನೆ ದಿನವಾಗಿದೆ.
ಮೊದಲ ಹಂತದ ಮತದಾನ ಡಿ. 22ರಂದು ನಡೆಯಲಿದೆ.
ಎರಡನೇ ಹಂತದ ಚುನಾವಣೆ ನಡೆಯುವ ಮೈಸೂರು, ನಂಜನಗೂಡು ಮತ್ತು ತೀ .ನರಸೀಪುರ ತಾಲೂಕುಗಳಲ್ಲಿ ಡಿ. 11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.