ಮೈಸೂರು: ಮೈಸೂರು ತಾಲೂಕು ಸಿದ್ದಲಿಂಗಪುರ ಗ್ರಾಮದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ಷಷ್ಠಿ ಜಾತ್ರೆ ಡಿ. 20ರಂದು ನಡೆಯಲಿದ್ದು, ಅಂದು ಸಾರ್ವಜನಿಕರು/ಭಕ್ತಾದಿಗಳಿಗೆ ದೇವರ ದರ್ಶನವನ್ನು ನಿರ್ಬಂಧಿಸಿ ಉತ್ಸವ, ಜಾತ್ರಾ ಕಾರ್ಯಕ್ರಮ ಸರ್ಕಾರದ ಮಾರ್ಗಸೂಚಿ ಪಾಲಿಸಿ ದೇವಾಲಯದ ಒಳ ಆವರಣದಲ್ಲಿ ಸರಳವಾಗಿ ನಡೆಸಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ.