ಮೈಸೂರು: ಕೊರೊನಾ ಸಮಯದಲ್ಲಿ ನಮ್ಮೆಲ್ಲರ ರಕ್ಷಣೆಗಾಗಿ ಪಣತೊಟ್ಟು ನಿಂತ ಸ್ವಚ್ಛತಾಸೇನಾನಿಗಳ ಯೋಗ ಕ್ಷೇಮ ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಮಂಗಳವಾರ ಹೇಳಿದರು.
ಬಡವರ್ಗದವರಿಗೆ ಹೊದಿಕೆ ವಿತರಣಾ ಅಭಿಯಾನಕ್ಕೆ ಚಾಮುಂಡಿ ಬೆಟ್ಟದ ಬಳಿ ಪ್ರಮೀಳಾ ನಾಯ್ಡು ಚಾಲನೆ ನೀಡಿ ಮಾತನಾಡಿದರು.
ಕೊರೊನಾ ತಡೆಯಲು ನಾವೆಲ್ಲರೂ ಮನೆಯೊಳಗೆ ಬಂದಿಯಾಗಿದ್ದೆವು. ಆದರೆ ಜೀವ ಭಯ ಬಿಟ್ಟು ನಮ್ಮೆಲ್ಲರ ರಕ್ಷಣೆಗಾಗಿ ಪಣತೊಟ್ಟು ನಿಂತ ಸ್ವಚ್ಛತಾಸೇನಾನಿಗಳ ಯೋಗ ಕ್ಷೇಮ ನಮ್ಮ ಹೊಣೆ ಎಂದರು.
ನಂತರ ಸಮಾಜಸೇವಕ ಡಿಟಿ. ಪ್ರಕಾಶ್ ರವರು ಮಾತನಾಡಿ ಮಳೆ, ಚಳಿ ಎನ್ನದೇ ಬಸ್ ನಿಲ್ದಾಣ, ರೈಲ್ವೇನಿಲ್ದಾಣ ದೇವಸ್ಥಾನ, ಚಿತ್ರಮಂದಿರ ಸರ್ಕಾರಿ ಕಟ್ಟಡಗಳ ಮುಂಭಾಗ ರಾತ್ರಿ ಕಳೆಯಲು ಸಾವಿರಾರು ಮಂದಿ ನಿರಾಶ್ರಿತರು ಮಲಗಿರುತ್ತಾರೆ. ಅವರಿರುವ ಜಾಗಕ್ಕೆ ಹೋಗಿ ಹೊದಿಕೆ ನೀಡುವ ಕಾರ್ಯವನ್ನು ಕೆ.ಎಂಪಿಕೆ ಟ್ರಸ್ಟ್ ಆಯೋಜಿಸಿರುವ ಅಭಿಯಾನಕ್ಕೆ ಸಾರ್ವಜನಿಕರು ಕೈಜೋಡಿಸಿ ನೆರವು ನೀಡಲು 9880752727 ಸಂಪರ್ಕಿಸಿ ಎಂದರು.
ನಂತರ ಯುವಮುಖಂಡ ಎನ್. ಎಮ್ ನವೀನ್ ಕುಮಾರ್ ರವರು ಮಾತನಾಡಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಬೀದಿಬದಿ ವ್ಯಾಪರಸ್ಥರಿಗೆ ಅಶಕ್ತರಿಗೆ ನಿರಾಶ್ರಿತರ ನೆರವಿಗೆ ತಂದರು ಸಹ ಸಮರ್ಪಕವಾಗಿ ತಲಪುತ್ತಿಲ್ಲ ಇತ್ತ ಸಂಬಂಧಪಟ್ಟ ಅಧಿಕಾರಿಗಳು ಪಲನಾಭಾವಿಗಳಿಗೆ ತಲುಪುವವರೆಗೂ ಶ್ರಮಿಸಬೇಕು ಎಂದರು.
ಜಿ.ಎಸ್.ಎಸ್ ಫೌಂಡೇಶನ್ ಅಧ್ಯಕ್ಷ ಶ್ರೀಹರಿ, ಮಾಜಿ ನಗರ ಪಾಲಿಕಾ ಸದಸ್ಯ ಎಂ ಡಿ ಪಾರ್ಥಸಾರಥಿ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಉದ್ಯಮಿ ಅಪೂರ್ವ ಸುರೇಶ್, ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಜೋಗಿ ಮಂಜು, ರಾಕೇಶ್ ಭಟ್, ಎಸ್ ಎನ್ ರಾಜೇಶ್, ಹರೀಶ್ ನಾಯ್ಡು, ಕಡಕೋಳ ಜಗದೀಶ್, ಜಿ ರಾಘವೇಂದ್ರ, ರಾಕೇಶ್ ಕುಂಚಿಟಿಗ, ಸುಚೇಂದ್ರ, ನವಿಲು ನಾಗರಾಜ್ ಚಕ್ರಪಾಣಿ ಹಾಗೂ ಇನ್ನಿತರರು ಇದ್ದರು.