ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕಳೆದ ಮೂರ್ನಾಲ್ಕು ವರ್ಷದಿಂದ ನೆನಗುದಿಗೆ ಬಿದ್ದಿದ್ದ ರಥ ನಿರ್ಮಾಣ ಕಾರ್ಯ ಈಗ ಬಿರುಸಿನಿಂದ ಸಾಗಿದೆ.
ಚಾಮರಾಜೇಶ್ವರ ರಥ ಕಿಡಿಗೇಡಿಯೋರ್ವನ ಕುಕೃತ್ಯಕ್ಕೆ ಬಲಿಯಾಗಿ ಬೆಂಕಿಗಾಹುತಿಯಾಗಿತ್ತು. ನಂತರದ ದಿನಗಳಲ್ಲಿ ರಥೋತ್ಸವ ಸ್ಥಬ್ದವಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1.20 ಕೋಟಿ ರಥಕ್ಕಾಗಿ ನೀಡಿದ್ದರು.
ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಡೆಯುತ್ತಿರುವ ಶ್ರೀ ಚಾಮರಾಜೇಶ್ವರ ನೂತನ ರಥದ ಕೆಲಸ ನಡೆಯುವ ಸ್ಥಳಕ್ಕೆ ಮಾಜಿ ಸಚಿವ ಚಾಮರಾಜನಗರ ಸಭಾ ಕ್ಷೇತ್ರ ಶಾಸಕ ಸಿ ಪುಟ್ಟರಂಗಶೆಟ್ಟಿ ಅವರು ಶ್ರೀ ಚಾಮರಾಜೇಶ್ವರ ಬ್ರಹ್ಮರಥೋತ್ಸವದ ನೂತನ ರಥ ನಿರ್ಮಾಣ ಕಾರ್ಯವನ್ನು ವೀಕ್ಷಣೆ ಮಾಡಿ ನಂತರ ಶಿಲ್ಪಿಗಳಿಂದ ಮಾಹಿತಿ ಪಡೆದರು.