ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಗುರುವಾರ ತಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ 10 ದಿನಗಳ ಕಾಲ ನಡೆಯುವ ಪಂಚಲಿಂಗ ದರ್ಶನ ಮಹೋತ್ಸವದ ಮೊದಲ ದಿನದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪಂಚಲಿಂಗ ದರ್ಶನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕರ್ನಾಟಕದ ಜನತೆಗೆ ಏಳು ವರ್ಷದ ನಂತರ ಪಂಚಲಿಂಗ ದರ್ಶನದ ಭಾಗ್ಯ ಬಂದಿದೆ. ಎಲ್ಲರಿಗೂ ಶುಭಾಶಯಗಳು, ಒಳ್ಳೆಯದಾಗಲಿ, ಕೊರೊನಾ ಮುಕ್ತ ಕರ್ನಾಟಕ ಆಗಲಿ. ಕೊರೊನಾ ಮುಕ್ತ ಪಂಚಲಿಂಗ ದರ್ಶನ ಆಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಮಾಧ್ಯಮ ಪ್ರತಿನಿಧಿಗ ಳೊಂದಿಗೆ ಸಚಿವರು ಮಾತನಾಡಿ ತಿಳಿಸಿದರು.
ತಾಂತ್ರಿಕ ಸಲಹಾ ಸಮಿತಿಯು 1 ಸಾವಿರ ಜನರಿಗೆ ಪ್ರತಿ ದಿನ ದರ್ಶನಕ್ಕೆ ಅವಕಾಶ ಮಾಡಿದೆ. ವಿಶೇಷ ದಿನವಾದ ಡಿ. 14ರಂದು 1500 ಜನರಿಗೆ ಅವಕಾಶ ನೀಡಿದೆ. ಅದ್ದರಿಂದ ಸ್ಥಳೀಯರಿಗೆ ಅವಕಾಶ ನೀಡಲಾಗಿದೆ ಎಂದರು.
ಸ್ಥಳೀಯರು ಸಹ ಎಲ್ಲರೂ ಒಟ್ಟೊಟ್ಟಿಗೆ ಬರುವ ಬದಲು ಹಂತ ಹಂತವಾಗಿ ಬೇರೆ ಬೇರೆ ಸಮಯದಲ್ಲಿ ಬಂದು ದೇವರ ದರ್ಶನ ಮಾಡಿ ಸಹಕಾರ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.
ಶಾಸಕ ಅಶ್ವಿನ್ ಕುಮಾರ್ ಅವರು ವಿಶೇಷವಾದ ಆಸಕ್ತಿ ವಹಿಸಿ, ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಕಾಪಾಡುವುದನ್ನು ಎಲ್ಲರೂ ಮಾಡಬೇಕು ಎಂದರು.
ಪೆÇಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದಾರೆಂದರು.
2013ರಲ್ಲಿ ನಡೆದ ಪಂಚಲಿಂಗ ದರ್ಶನ ಸಂದರ್ಭದಲ್ಲಿ 6ರಿಂದ 7 ಲಕ್ಷ ಜನ ಇಲ್ಲಿಗೆ ಬಂದು ದೇವರ ದರ್ಶನ ಪಡೆದ ಮಾಹಿತಿ ಇದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕಡಿಮೆ ಸಂಖ್ಯೆಯ ಜನತೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಅಶ್ವಿನ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ್, ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಅಪರ ಪೆÇಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿ.ಇ.ಒ. ಪರಮೇಶ್, ಉಪವಿಭಾಗಾಧಿಕಾರಿ ಡಾ. ಎನ್.ಸಿ. ವೆಂಕಟರಾಜು, ಡಿವೈಎಸ್‍ಪಿ ಗೋವಿಂದರಾಜು, ಮತ್ತಿತರರು ಉಪಸ್ಥಿತರಿದ್ದರು.