ಬೈಕ್ ಗೆ ಕಾರು ಡಿಕ್ಕಿ: ಒಂದೇ ಕುಟುಂಬದ ಮೂರು ಮಂದಿ ಸಾವು

ಮೈಸೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಮೈಸೂರು-ಬೆಂಗಳೂರು ರಸ್ತೆ ದಂಡಿಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.
ಸಿದ್ದಲಿಂಗಪುರದ ರಮೇಶ್ (41), ಈತನ ಪತ್ನಿ ಉಷಾ (34) ಮತ್ತು ಪುತ್ರಿ ಮೊನಿಷಾ(5) ಅಪಘಾಥದಲ್ಲಿ ಮೃತಪಟ್ಟವರು. ಪುತ್ರ ಸಿದ್ದಾರ್ಥ (3) ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿದ್ದಲಿಂಗಪುರದಿಂದ ಮೈಸೂರು ಕಡೆ ಇವರು ಬೈಕಿನಲ್ಲಿ ಬರುತ್ತಿದ್ದರು. ಮೈಸೂರಿನಿಂದ ಶ್ರೀರಂಗಪಟ್ಟಣದ ಕಡೆ ಚಲಿಸುತ್ತಿದ್ದ ಕಾರು ರಸ್ತೆ ವಿಭಜಕ ದಾಟಿ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತವಾದ ತಕ್ಷಣ ಕಾರಿನ ಚಾಲಕ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಡಿಸಿಪಿ ಗೀತಾ ಪ್ರಸನ್ನ, ಎಸಿಪಿ ಸಂದೇಶ್ ಕುಮಾರ್ ತೆರಳಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಎನ್. ಆರ್. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.