ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
ಚಾಮರಾಜನಗರ: ಕೆಲವೊಮ್ಮೆ ಪುರುಷರ ಕುಂದುಕೊರತೆ ಕೇಳಿರಬಹುದು, ಅತ್ತ ವಸತಿ ನಿಲಯದಲ್ಲಿ ವಾಸ ಮಾಡೋ ನಿವಾಸಿಗಳ ಕುಂದುಕೊರತೆ ಕೇಳಿರಬಹುದು ಆದರೆ ಮಹಿಳಾ ಸಿಬ್ಬಂದಿಗಳ ಕುಂದುಕೊರತೆ ಕೇಳಿರಬಹುದೆ ಅಥವಾ ಕೇಳಿದ್ದರೂ ಸಮಸ್ಯೆನಿವಾರಣೆ ಮಾಡಲಾಗಿದೆಯೇ ಎಂಬ ಅನುಮಾನ ಮೂಡಿಸುತ್ತದೆ.
ಚಾಮರಾಜನಗರದಲ್ಲಿ ಇಂತಹ ವ್ಯವಸ್ಥೆ ಇದೆಯೋ ಇಲ್ಲವೊ ಎಂಬ ಅನುಮಾನ ಮೂಡಿದರೆ ಸತ್ಯ ಎಂದೆ ಹೇಳಬಹುದು.
ನೂತನ ಮೇಲ್ದರ್ಜೆಗೆರಿದ ಠಾಣೆಗಳಲ್ಲಿ ಪ್ರತ್ಯೇಕ ಶೌಚಾಲಯ ಬಿಟ್ಟರೆ ಬೇರೆ ಬಹುತೇಕ ಠಾಣೆಗಳಲ್ಲಿ ಮೂಲಭೂತ ಸೌಲಭ್ಯದ ಕೊರತೆ ಸಹ ಕಾಣುತ್ತದೆ.
ಮತ್ತೊಂದೆಡೆ ಕೆಲವೊಮ್ಮೆ ಸಭೆ ಮಾಡಿದರೂ ಪ್ರತ್ಯೇಕ ಖಾಸಗಿತ್ವ ಇರಲಾರದು. ಪುರುಷ ವರ್ಗದವರ ಮಧ್ಯೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವುದು ಅಸಾಧ್ಯ ಎಂದೆ ಹೇಳಬಹುದು.
ಚಾಮರಾಜನಗರ ಅಧೀಕ್ಷಕಿ ದಿವ್ಯ, ಹೆಚ್ಚುವರಿ ಅಧೀಕ್ಷಕಿ ಅನಿತಾ ಹಾಗೂ ಉಪ ಅಧೀಕ್ಷಕಿಯರಾದ ಪ್ರಿಯದರ್ಶಿನಿ ಈ ಮೂವರು ಕಾನೂನು ಸುವ್ಯವಸ್ಥಿತ ಇಲಾಖೆಯ ಪೆÇಲೀಸ್ ಮಹಿಳಾ ಅಧಿಕಾರಿಗಳಾಗಿದ್ದು ಕುಂದುಕೊರತೆ ಸಭೆಯನ್ನ ಖಾಸಗಿಯಾಗಿ ಕರೆದು ಆಲಿಸುವರೊ ಹಾಗೂ ಆಲಿಸಿದ ಸಮಸ್ಯೆಗಳಿದ್ದರೆ ಅದನ್ನ ಬಗೆಹರಿಸುತ್ತಾರೋ ಕಾದು ನೋಡಬೇಕಾಗಿದೆ.